ಈಗ ಬಾಟಮ್‌ಲೆಸ್ ಕೇಟ್ ಚಿತ್ರದ ಸರದಿ...

7

ಈಗ ಬಾಟಮ್‌ಲೆಸ್ ಕೇಟ್ ಚಿತ್ರದ ಸರದಿ...

Published:
Updated:

ಲಂಡನ್ (ಪಿಟಿಐ): ರಾಜಕುಮಾರ ಹ್ಯಾರಿ ಅವರ ಅರೆ ನಗ್ನ ಚಿತ್ರ ಹಾಗೂ ರಾಜಕುಮಾರ ವಿಲಿಯಮ್ಸ ಪತ್ನಿ ಕೇಟ್ ಮಿಡ್ಲ್‌ಟನ್ ಅವರ `ಟಾಪ್‌ಲೆಸ್~ ಛಾಯಾಚಿತ್ರ ಪತ್ರಿಕೆಗಳಲ್ಲಿ ಪ್ರಕಟಗೊಂಡು ತೀವ್ರ ಮುಜುಗರ ಅನುಭವಿಸಿದ್ದ ಬ್ರಿಟನ್ನಿನ ರಾಜ ಮನೆತನ ಈಗ ಅಂತಹದ್ದೇ ಪ್ರಕರಣದಲ್ಲಿ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.

ಬ್ರಿಟನ್ನಿನ ಭವಿಷ್ಯದ ರಾಣಿ ಕೇಟ್ ಮಿಡ್ಲ್‌ಟನ್ ಅವರ `ಬಾಟಮ್‌ಲೆಸ್~ ಛಾಯಾಚಿತ್ರವನ್ನು ಡೆನ್ಮಾರ್ಕ್‌ನ ನಿಯತಕಾಲಿಕವೊಂದು ಪ್ರಕಟಿಸಿದೆ.ಪತಿ ವಿಲಿಯಮ್ಸ ಅವರೊಂದಿಗೆ ರಜಾ ಕಳೆಯುತ್ತಿದ್ದ ಕೇಟ್ ಅವರು ಬಿಕಿನಿ  ಬದಲಾಯಿಸುತ್ತಿದ್ದ ದೃಶ್ಯವನ್ನು  ಡೆನ್ಮಾರ್ಕ್‌ನ  ನಿಯತಕಾಲಿಕ  `ಸೆ ಒಗ್ ಹೊರ್~ (ನೋಡಿ ಮತ್ತು ಕೇಳಿ) ಪ್ರಕಟಿಸಿದೆ. ಇತರ ಯಾವುದೇ ಪತ್ರಿಕೆಗಳು  ಇದುವರೆಗೆ ಪ್ರಕಟಿಸದೇ ಇರುವ ರೀತಿಯಲ್ಲಿ ಈ ನಿಯತಕಾಲಿಕೆಯು 16 ವಿಶೇಷ ಪುಟಗಳಲ್ಲಿ ಕೇಟ್ ಅವರ ಅರೆನಗ್ನ ಚಿತ್ರಗಳನ್ನು ಮುದ್ರಿಸಿದೆ. ಇವುಗಳಲ್ಲಿ ಎದುರು ಬದುರಾಗಿ ಸೆರೆ ಹಿಡಿಯಲಾಗಿರುವ ಬಿಕಿನಿ ಬದಲಾಯಿಸುವ ಮೂರು ಚಿತ್ರಗಳಿವೆ ಎಂದು `ದಿ ಡೈಲಿ ಮೇಲ್~ ವರದಿ ಮಾಡಿದೆ.ಕೇಟ್ ಅವರ `ಬಾಟಮ್‌ಲೆಸ್~ ಚಿತ್ರವನ್ನು ನಿಯತಕಾಲಿಕೆಯು ತನ್ನ ಮುಖಪುಟದಲ್ಲಿಯೇ ಪ್ರಕಟಿಸಿದೆ.

ರಾಜ ದಂಪತಿ ದಕ್ಷಿಣ ಫ್ರಾನ್ಸ್‌ನಲ್ಲಿ ರಜಾ ದಿನ ಕಳೆಯುತ್ತಿದ್ದ ಸಂದರ್ಭದಲ್ಲಿಯೇ ಈ ಛಾಯಾಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry