ಈಗ ಸೊಳ್ಳೆ ಮೇಲೆ ದಾಳಿಗೆ ಡಿಆರ್ ಡಿ ಒ ಸಜ್ಜು..!

7

ಈಗ ಸೊಳ್ಳೆ ಮೇಲೆ ದಾಳಿಗೆ ಡಿಆರ್ ಡಿ ಒ ಸಜ್ಜು..!

Published:
Updated:

ನವದೆಹಲಿ (ಪಿಟಿಐ): ಸಶಸ್ತ್ರ ಪಡೆಗಳಿಗೆ ಕ್ಷಿಪಣಿ ಮತ್ತು ಯುದ್ಧೋಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿ ಒ), ಈಗ ಮಾನವನ ಅನಾದಿ ಕಾಲದ ವೈರಿಗಳಾದ ~ಸೊಳ್ಳೆ~ಗಳ ಮೇಲೆ ದಾಳಿಗೆ ಸಜ್ಜಾಗಿದೆ.ಮಲೇರಿಯಾ, ಡೆಂಗೆಯಂತಹ ಕಾಯಿಲೆಗಳ ವಾಹಕವಾಗಿ ಕೆಲಸ ಮಾಡುವ ಮಾನವ ಶತ್ರು ~ಸೊಳ್ಳೆಗಳನ್ನು ನಿವಾರಿಸುವಂತಹ  ಹೊಸ ಕೀಟ ನಿರೋಧಕ ಕ್ರೀಮ್ ನ್ನು  ಡಿಆರ್ ಡಿ ಒ ಅಭಿವೃದ್ಧಿ ಪಡಿಸಿದೆ.~ಮ್ಯಾಕ್ಸೊ ಮಿಲಿಟರಿ~ ಮತ್ತು ~ಮ್ಯಾಕ್ಸೊ ಸೇಫ್ ಅಂಡ್ ಸಾಫ್ಟ್ ವೈಪ್ಸ್~ ಎಂಬ ಎರಡು ಉತ್ಪನ್ನಗಳನ್ನು ಇಲ್ಲಿ ಸೋಮವಾರ  ಬಿಡುಗಡೆ ಮಾಡಿದ ಡಿಆರ್ ಡಿ ಒ ~ಈ ಕ್ರೀಮ್ ಸೊಳ್ಳೆಗಳನ್ನು ಮೂರ್ಖವನ್ನಾಗಿ ಮಾಡುತ್ತವೆ. ಸುವಾಸನೆಯುಳ್ಳ ಈ ಕ್ರೀಮ್ ಚರ್ಮದ ಸೂಕ್ಷ್ಮ ರಂಧ್ರಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದೂ ಇಲ್ಲ. ಸಾಮಾನ್ಯವಾಗಿ ಇಂತಹ ಕ್ರೀಮ್ ಗಳಿಂದ ಸೂಕ್ಷ್ಮರಂಧ್ರಗಳಿಗೆ ಅಡ್ಡಿಯಾಗುತ್ತದೆ~ ಎಂದು ಹೇಳಿತು.ಪರೀಕ್ಷಿಸಲಾಗಿರುವ ಈ ವಿಶಿಷ್ಟ ಕ್ರೀಮ್ ಸೊಳ್ಳೆಗಳನ್ನು ಮರಳು ಮಾಡಿ ಆಕರ್ಷಿಸುತ್ತದೆ ಮತ್ತು ವಂಚಿಸುತ್ತದೆ. ಪಕ್ಕದಲ್ಲೇ ಮಾನವ ರಕ್ತ ಇದೆ ಎಂಬುದನ್ನು ಸೊಳ್ಳೆಗಳ ಅರಿವಿಗೇ ಬಾರದಂತೆ ಈ ಕ್ರೀಮ್ ಮಾಡುತ್ತದೆ ಎಂದು ಡಿಆರ್ ಡಿ ಒ ಮುಖ್ಯ ನಿಯಂತ್ರಕ ಪ್ರಹ್ಲಾದ ವರದಿಗಾರರಿಗೆ ವಿವರಿಸಿದರು.ಅರಣ್ಯ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಬೇಕಾದ ಯೋಧರನ್ನು ಮಲೇರಿಯಾ, ಚಿಕುನ್ ಗುನ್ಯ, ಡೆಂಗೆಯಂತಹ ರೋಗಗಳಿಂದ ರಕ್ಷಿಸುವ ಗುರಿ ಇಟ್ಟುಕೊಂಡು ಈ ಕ್ರೀಮ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಜ್ಯೋತಿ ಲ್ಯಾಬೋರೇಟರಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಂ.ಪಿ. ರಾಮಚಂದ್ರನ್ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry