ಶನಿವಾರ, ಏಪ್ರಿಲ್ 10, 2021
32 °C

ಈಜಲು ಹೋದ ನಾಲ್ವರು ಜಲಸಮಾಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬಿಡದಿ ಬಳಿಯ ನೆಲ್ಲಿಗುಡ್ಡೆ ಕೆರೆಯಲ್ಲಿ ಈಜಾಡಲು ಹೋಗಿದ್ದ ಬೆಂಗಳೂರಿನ ನಾಲ್ವರು ಸ್ನೇಹಿತರು ಜಲ ಸಮಾಧಿಯಾದ ದಾರುಣ ಘಟನೆ ಶಿವರಾತ್ರಿಯಂದು ನಡೆದಿದೆ.ವಿಜಯನಗರ ಬಳಿಯ ಚೋಡರಪಾಳ್ಯದ ನಿವಾಸಿಗಳಾದ ಪುನಿತ್  (17), ಜಗನ್ (16), ಮನೋಜ್ (21) ಹಾಗೂ ಮಾಗಡಿ ರಸ್ತೆಯ ದಾಸರಹಳ್ಳಿಯ ಯಶಸ್ವಿನಿ (17) ಜಲ ಸಮಾಧಿಯಾದ ದುರ್ದೈವಿಗಳು.ವಿವರ:  ಶಿವರಾತ್ರಿ ರಜೆ ಕಳೆಯಲು  ಬೆಂಗಳೂರಿನಿಂದ ನಾಲ್ವರು ಬಾಲಕಿಯರು ಹಾಗೂ ಏಳು ಬಾಲಕರು ಬುಧವಾರ ಬೆಳಿಗ್ಗೆ 10.30 ಗಂಟೆಗೆ ಬಿಡದಿಗೆ ಬಂದಿದ್ದರು. ಕೆರೆಯಲ್ಲಿ ಈಜಲು ಇಳಿದ ಕೆಲವರು ಕೆರೆಯ ಮಧ್ಯಭಾಗಕ್ಕೆ ಹೋಗುತ್ತಿದ್ದಂತೆ ಒಬ್ಬ ಬಾಲಕ ಮುಳುಗುವುದನ್ನು ಕಂಡು, ರಕ್ಷಿಸಲು ಧಾವಿಸಿದರೂ ಪ್ರಯೋಜನ ಆಗಲಿಲ್ಲ. ಮುಳುಗುತ್ತಿದ್ದವನ ಜತೆಗೆ ಬಾಲಕಿ ಯಶಸ್ವಿನಿ ಸೇರಿದಂತೆ ಇನ್ನೂ ಇಬ್ಬರು ಬಾಲಕರು ಜಲ ಸಮಾಧಿಯಾಗಿದ್ದಾರೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ತಿಳಿಸಿದರು. ಆರು ವಿದ್ಯಾರ್ಥಿಗಳು ಈ ದುರಂತದಿಂದ ಪಾರಾಗಿದ್ದಾರೆ. ಹರೀಶ್ ಎಂಬುವ ಹೆದರಿ ಓಡಿ ಹೋಗಿದ್ದಾನೆ.ಶವ ಪತ್ತೆ: ಸ್ಥಳೀಯ ಜನರ ಸಹಕಾರದಿಂದ ಮನೋಜ್ ಮತ್ತು ಯಶಸ್ವಿನಿಯ ಶವಗಳನ್ನು  ಹೊರ ತೆಗೆಯಲಾಗಿದೆ. ಉಳಿದಿಬ್ಬರ  ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.‘ಮದ್ಯ ಸೇವಿಸಿದ್ದರು’: ‘ಹಬ್ಬದ ರಜೆ ಕಳೆಯಲು  ಬಿಡದಿಗೆ ಬಂದೆವು.  ದೇವರ ದರ್ಶನ ಪಡೆದು, ನಂತರ ಆಟೊದಲ್ಲಿ ಎಲ್ಲರೂ ನೆಲ್ಲಿಗುಡ್ಡೆ ಕೆರೆಗೆ ಬಂದ ಮೇಲೆ ಮನೋಜ್ ಸೇರಿದಂತೆ ಒಂದಿಬ್ಬರು ಮದ್ಯ ಸೇವಿಸಿ ಈಜಲು ಹೋದರು. ಅಪಾಯದಲ್ಲಿ ಸಿಲುಕಿದ್ದ ಒಬ್ಬನನ್ನು ಉಳಿಸಲು ಹೋಗಿ ಮೂವರೂ  ಮುಳುಗಿ ಸತ್ತರು’ ಎಂದು ತಂಡದಲ್ಲಿದ್ದ ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶರತ್ ತಿಳಿಸಿದರು.ಎಲ್ಲರೂ ವಿದ್ಯಾರ್ಥಿಗಳು: ಈ ತಂಡದಲ್ಲಿ ಇದ್ದವರೆಲ್ಲ ಬಹುತೇಕ ಎಸ್ಸೆಸ್ಸೆಲ್ಸಿ, ಪಿ.ಯು.ಸಿ ವಿದ್ಯಾರ್ಥಿಗಳು. ಇವರೆಲ್ಲ ಸೇಂಟ್ ಜೋಸೆಫ್ ಶಾಲೆ, ಕೆಎಲ್‌ಇ ಕಾಲೇಜು, ರಾಘವೇಂದ್ರ ಶಾಲೆಯ ವಿದ್ಯಾರ್ಥಿಗಳು. ಮೂವರು ಬಾಲಕಿಯರು ಟೆಲಿಕಾಲ್ ಸೇವಾ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರುತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.