ಶುಕ್ರವಾರ, ಮಾರ್ಚ್ 5, 2021
18 °C

ಈಜಿನ ಮೋಜು,ಹಗಲು-ರಾತ್ರಿ ಬೆವರಿನ ಸ್ನಾನ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಈಜಿನ ಮೋಜು,ಹಗಲು-ರಾತ್ರಿ ಬೆವರಿನ ಸ್ನಾನ

ವಿಜಾಪುರ: ಮಕ್ಕಳಿಗೆ ಈಗ ರಜೆಯ ಮಜಾ. ಉರಿಬಿಸಿಲಿನಿಂದ ರಕ್ಷಣೆ ಪಡೆಯಲು ಬಹುತೇಕ ಮಕ್ಕಳು ಈಜು ಗೊಳದತ್ತ ಮುಖ ಮಾಡಿದ್ದಾರೆ. ನಗರ ದಲ್ಲಿರುವ ಈಜುಗೊಳಗಳಿಗೆ ಹೋಗಿ ನೀರಿನಲ್ಲಿ ಈಜಿ-ಆಟವಾಡುತ್ತ ಸಂಭ್ರಮಿ ಸುತ್ತಿದ್ದಾರೆ.ಮಹಾನಗರ ಪಾಲಿಕೆ ಸ್ಥಾನಮಾನದ ಹೊಸ್ತಿಲಲ್ಲಿರುವ ವಿಜಾಪುರ ನಗರದಲ್ಲಿ, ನಗರಸಭೆಗೆ ಸೇರಿದ ಒಂದೇ ಒಂದು ಈಜುಗೊಳ ಇಲ್ಲ. ಇಲ್ಲಿಯ ಜಲನಗರ ದಲ್ಲಿರುವ ನಗರಸಭೆಯ ವಿಶಾಲವಾದ ನಿವೇಶನದಲ್ಲಿ ಸುಸಜ್ಜಿತ ಈಜುಗೊಳ ನಿರ್ಮಿಸುವ ನಗರಸಭೆಯ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಖಾಸಗಿ ಈಜುಗೊಳಗಳೇ ಇಲ್ಲಿಯ ವಿದ್ಯಾರ್ಥಿಗಳು- ಜನತೆಗೆ ಆಸರೆ.ವಿಜಾಪುರ ನಗರದಲ್ಲಿ ಇರುವುದು ಕೆಲವೇ ಕೆಲವು ಈಜುಗೊಳು ಮಾತ್ರ. ಇಲ್ಲಿಯ ಬಾಗಲಕೋಟೆ ರಸ್ತೆಯಲ್ಲಿರುವ ಭಾರತ ಈಜುಗೊಳ, ಸೊಲ್ಲಾಪುರ ರಸ್ತೆಯಲ್ಲಿರುವ ಡಾ.ನಾಗೂರ ಹೆಲ್ತ್ ಕ್ಲಬ್, ಹೊಟೇಲ್ ಶಶಿನಾಗ, ಜೆ.ಬಿ. ಗಾರ್ಡನ್‌ನಲ್ಲಿಯ ಈಜುಗೊಳ ಮುಂತಾದವು...`8 ರಿಂದ 80 ವರ್ಷಗಳ ವಯೋ ಮಾನದವರಿಗೆ ನಮ್ಮ ಈಜುಗೊಳಕ್ಕೆ ಪ್ರವೇಶವಿದೆ. ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೂ ಇದು ತೆರೆದಿರುತ್ತದೆ. ಬೆಳಿಗ್ಗೆ 7ರಿಂದ ಸಂಜೆ 4ರ ವರೆಗೆ ಈಜು ತರಬೇತಿ ನೀಡಲಾಗುತ್ತಿದ್ದು, ನುರಿತ ಈಜು ತರಬೇತುದಾರರು ಇದ್ದಾರೆ. ಸಂಜೆ 6ರಿಂದ 7ರ ವರೆಗೆ ಮಹಿಳೆ ಯರಿಗಾಗಿಯೇ ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ~ ಎಂದು ಡಾ.ನಾಗೂರ ಹೆಲ್ತ್ ಕ್ಲಬ್‌ನ ಡಾ.ಬಾಬು ನಾಗೂರ ಹೇಳುತ್ತಾರೆ.`ನಮ್ಮದು ವಿಜಾಪುರ ನಗರದ ಮೊದಲ ಹಾಗೂ ವಿಶಾಲವಾಗಿರುವ ಈಜುಗೊಳ. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುತ್ತದೆ~ ಎನ್ನುತ್ತಾರೆ ಭಾರತ ಈಜುಗೊಳದ ಮಾಲೀಕ ವೈ.ಕೆ. ಹೂಗಾರ.`ಮಕ್ಕಳಿಗಾಗಿಯೇ ನಮ್ಮಲ್ಲಿ ಪ್ರತ್ಯೇಕ ಈಜುಗೊಳವಿದೆ. ಬೆಳಿಗ್ಗೆ 9ರಿಂದ 10ರ ವರೆಗೆ ಮಕ್ಕಳಿಗೆ ತರಬೇತಿ ನೀಡ ಲಾಗುತ್ತಿದೆ. ಮೂವರು ತರಬೇತು ದಾರರು ಇದ್ದಾರೆ. 21 ದಿನಗಳ ತರಬೇತಿಗೆ 12 ವರ್ಷದೊಳಗಿನ ಮಕ್ಕಳಿಗೆ ರೂ.1000, 12 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ರೂ.1200 ಶುಲ್ಕ ನಿಗದಿ ಮಾಡಿದ್ದೇವೆ. ಸಂಜೆ 5ರಿಂದ 6 ಅವಧಿ ಮಹಿಳೆಯರಿಗೆ ಮೀಸಲು~ ಎಂಬುದು ಅವರ ವಿವರಣೆ.ಅಲ್ಲದೆ ತಮ್ಮಲ್ಲಿ ಆಜೀವ ಸದಸ್ಯರು, ವಾರ್ಷಿಕ, ಮಾಸಿಕ ಅವಧಿಯ ಸದಸ್ಯರೂ ಇದ್ದಾರೆ ಎನ್ನುತ್ತಾರೆ ಅವರು.`ಪರೀಕ್ಷೆ ಮಗಿಸಿ ಈಗಷ್ಟೇ ಫ್ರೀ ಆಗಿದ್ದೇವೆ. ಹೊರಗೆ ಸುತ್ತಾಡಬೇಕೆಂದರೆ ಬಿಸಿಲು- ಧಗೆಯ ಕಾಟ. ಹೀಗಾಗಿ ಈಜು ತರಬೇತಿ ಪಡೆಯುತ್ತಿದ್ದೇವೆ. ಮಿತ್ರರೊಂದಿಗೆ ಸೇರಿ ಈಜುವುದು ಬಹಳ ಖುಷಿ ಕೊಡುತ್ತದೆ~ ಎಂಬ ಸಂತಸ ವಿದ್ಯಾರ್ಥಿ ಆದರ್ಶ ಅವರದ್ದು. ಜಿಲ್ಲೆಯಲ್ಲಿ ಮುಂಗಾರು-ಹಿಂಗಾರು ಎರಡೂ ಮಳೆಗಳು ಕೈಕೊಟ್ಟಿವೆ.ಕೆರೆ-ಕಟ್ಟೆಗಳೆಲ್ಲ ಬತ್ತಿ ಬರಿದಾಗಿವೆ. ಗಿಡ-ಮರಗಳು ಒಣಗಿ ನಿಂತಿವೆ.  ಸಹಜವಾಗಿಯೇ ಬಿಸಿಲಿನ ರುದ್ರನರ್ತನ ಆರಂಭವಾಗಿದೆ. ನಗರದಲ್ಲಿ ಈಗ ಸರಾಸರಿ 39 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿದೆ. ರಾತ್ರಿಯ ಉಷ್ಣಾಂಶ ಸರಾಸರಿ 24 ಡಿ.ಸೆ.. ಹೀಗಾಗಿ ಹಗಲು- ರಾತ್ರಿ ಬೆವರಿನ ಸ್ನಾನ ತಪ್ಪುತ್ತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.