ಈಜಿಪ್ಟ್‌ನಲ್ಲಿ ಅರಾಜಕತೆ : ಅನಿಲ ಪೂರೈಕೆ ಸ್ಥಗಿತ ಸಂಭವ

7

ಈಜಿಪ್ಟ್‌ನಲ್ಲಿ ಅರಾಜಕತೆ : ಅನಿಲ ಪೂರೈಕೆ ಸ್ಥಗಿತ ಸಂಭವ

Published:
Updated:

ಜೆರುಸಲೇಂ (ಎಎಫ್‌ಪಿ): ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ವಿರುದ್ಧ ಸಿಡಿದೆದ್ದಿರುವ ನಾಗರಿಕರು ನಡೆಸುತ್ತಿರುವ ಚಳವಳಿಯು ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಬಹುದು ಎಂದು ಇಸ್ರೇಲ್ ಮಂಗಳವಾರ ಕಳವಳ ವ್ಯಕ್ತಪಸಿದೆ.‘ಈಜಿಪ್ಟ್‌ನಲ್ಲಿ ಉಂಟಾಗಿರುವ ಅರಾಜಕತೆಯನ್ನು ಗಮನಿಸಿದರೆ ಮಧ್ಯ ಪ್ರಾಚ್ಯದಲ್ಲಿ ಮತ್ತೆ ಮತ್ತೆ ರಾಜಕೀಯ ಅಸ್ಥಿರತೆ ಕಾಣಿಸುತ್ತಿದೆ. ಆದ್ದರಿಂದ ಇಸ್ರೇಲ್ ಇಂಧನ ಸುರಕ್ಷತೆ ವಿಚಾರದಲ್ಲಿ ಬೇರೆಯವರನ್ನು ಅವಲಂಬಿಸುವ ಬದಲು ಸ್ವಾವಲಂಬಿಯಾಗುವುದು ಕ್ಷೇಮಕರ’ ಎಂದು ಇಸ್ರೇಲ್‌ನ ರಾಷ್ಟ್ರೀಯ ಮೂಲ ಸೌಕರ್ಯ ಸಚಿವಾಲಯದ ವಕ್ತಾರ ಉಜಿ ಲ್ಯಾಂಡೌ ಹೇಳಿದ್ದಾರೆ.ಇಸ್ರೇಲ್‌ಗೆ ಪೂರೈಕೆಯಾಗುವ ನೈಸರ್ಗಿಕ ಅನಿಲದಲ್ಲಿ ಶೇ 40ರಷ್ಟು ಭಾಗ ಈಜಿಪ್ಟ್‌ನಿಂದಲೇ ಸರಬರಾಜು ಆಗುತ್ತದೆ. ಕಳೆದ ಡಿಸೆಂಬರ್‌ನಲ್ಲಿ ಇಸ್ರೇಲ್‌ನ ನಾಲ್ಕು ಅನಿಲ ಕಂಪೆನಿಗಳು ಈಜಿಪ್ಟ್‌ನೊಂದಿಗೆ 20 ವರ್ಷಗಳ ಕಾಲ ಅನಿಲ ಪೂರೈಕೆಯ ಒಪ್ಪಂದ ಮಾಡಿಕೊಂಡಿದೆ. ಇದು ಒಂದು ಸಾವಿರ ಕೋಟಿ ಡಾಲರ್‌ಗಳ ಬೃಹತ್ ಮೊತ್ತದ ವ್ಯವಹಾರವಾಗಿದೆ.ಆದರೆ ಈಗ ಈಜಿಪ್ಟ್‌ನಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯಿಂದ ಮುಬಾರಕ್ ಪದಚ್ಯುತರಾಗಿ ಹೊಸ ಸರ್ಕಾರ ರಚನೆಯಾದರೆ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ 30 ವರ್ಷಗಳ ಹಿಂದೆ ಆದ ಶಾಂತಿ ಪಾಲನೆಯ ಒಪ್ಪಂದಗಳನ್ನು ಮಾನ್ಯ ಮಾಡದೇ ಇರಬಹುದು. ಈ ಒಪ್ಪಂದದಲ್ಲಿ ನೈಸರ್ಗಿಕ ಅನಿಲ ಪೂರಕೆ ಕೂಡ ಸೇರಿರುವುದರಿಂದ ಈಜಿಪ್ಟ್ ಅನಿಲ ಪೂರೈಕೆಯನ್ನೇ ಸ್ಥಗಿತ ಮಾಡಬಹುದು ಎಂದು ಇಸ್ರೇಲ್ ಆತಂಕ ವ್ಯಕ್ತಪಡಿಸಿದೆ.ಈಜಿಪ್ಟ್‌ನಲ್ಲಿ ಮುಬಾರಕ್ ವಿರುದ್ಧ ಚಳವಳಿ ನಡೆಸುತ್ತಿರುವ ಮುಸ್ಲಿಂ ಸಹೋದರತ್ವ (ಮುಸ್ಲಿಂ ಬ್ರದರ್‌ಹುಡ್)ಸಂಘಟನೆಯು ಇಸ್ರೇಲ್‌ಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿರುವುದು ಇಸ್ರೇಲ್‌ನ ಈ ಆತಂಕವನ್ನು ದ್ವಿಗುಣಗೊಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry