ಈಜಿಪ್ಟ್: ಪತ್ರಕರ್ತೆ ಮೇಲೆ ದೌರ್ಜನ್ಯ

7

ಈಜಿಪ್ಟ್: ಪತ್ರಕರ್ತೆ ಮೇಲೆ ದೌರ್ಜನ್ಯ

Published:
Updated:

ನ್ಯೂಯಾರ್ಕ್ (ಪಿಟಿಐ): ಹೋಸ್ನಿ ಮುಬಾರಕ್ ರಾಜೀನಾಮೆಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಈಜಿಪ್ಟ್ ನಾಗರಿಕರ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದ ಅಮೆರಿಕದ ಪತ್ರಕರ್ತೆಯನ್ನು ಅಮಾನುಷವಾಗಿ ಥಳಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವರದಿಯಾಗಿದೆ.ಪತ್ರಕರ್ತೆಯನ್ನು ‘ಸಿಬಿಎಸ್’ ಟೆಲಿವಿಷನ್‌ನ ಮುಖ್ಯ ಬಾತ್ಮೀದಾರರಾದ ಲಾರಾ ಲೊಗಾನ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ನಂತರ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಿಬಿಎಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನರಲ್ಲಿ ಸುಮಾರು 200ರಷ್ಟಿದ್ದ ಗುಂಪೊಂದು ಚಾನೆಲ್‌ನ ವರದಿಗಾರರ ತಂಡದ ಮೇಲೆ ಮುಗಿಬಿತ್ತು. ಈ ಸಂದರ್ಭದಲ್ಲಿ ಲಾರಾ ತಮ್ಮ ತಂಡದಿಂದ ಬೇರೆಯಾದರು.ಆಗ ಆಕೆಯ ಮೇಲೆ ಉನ್ಮತ್ತ ಗುಂಪು ದಾಳಿ ಮಾಡಿತಲ್ಲದೆ ಲೈಂಗಿಕ ದೌರ್ಜನ್ಯವನ್ನೂ ನಡೆಸಿದೆ. ನಂತರ ಈಕೆಯನ್ನು ಅಲ್ಲಿದ್ದ ಸುಮಾರು 20 ಈಜಿಪ್ಟ್ ಸೈನಿಕರು ಮತ್ತು ಮಹಿಳೆಯರು ರಕ್ಷಣೆ ಮಾಡಿದರು.ತಕ್ಷಣ ಹೋಟೆಲ್‌ಗೆ ಮರಳಿದ ಪತ್ರಕರ್ತೆ ಮರುದಿನ ಮೊದಲ ವಿಮಾನದಲ್ಲೇ ಅಮೆರಿಕಕ್ಕೆ ವಾಪಸಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಅತ್ಯಾಚಾರದ ಪ್ರಕರಣವಲ್ಲ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry