ಈಜಿಪ್ಟ್ ಪಿರಮಿಡ್ ಬಳಿ ಬಾಂಬ್ ಸ್ಫೋಟ

ಕೈರೊ (ಪಿಟಿಐ): ಈಜಿಪ್ಟ್ನ ಗಿಜಾದಲ್ಲಿರುವ ಐತಿಹಾಸಿಕ ಪಿರಮಿಡ್ಗಳ ಬಳಿ ಶುಕ್ರವಾರ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು 10 ಮಂದಿ ಸಾವನ್ನಪ್ಪಿದ್ದಾರೆ.
ಬಾಂಬ್ ನಿಷ್ಕ್ರಿಯಗೊಳಿಸುವ ಯತ್ನದಲ್ಲಿ ತೊಡಗಿದ್ದ ವೇಳೆ ಅದು ಸ್ಫೋಟಿಸಿ ಏಳು ಮಂದಿ ಪೊಲೀಸರು ಹಾಗೂ ಮೂವರು ನಾಗರಿಕರು ಮೃತಪಟ್ಟರು ಎಂದು ’ಅಲ್ ಅಹ್ರಮ್’ ವರದಿ ಮಾಡಿದೆ. ಇಲ್ಲಿನ ಕಟ್ಟಡಗಳನ್ನು ಶಂಕಿತ ಇಸ್ಲಾಮಿಕ್ ಉಗ್ರರು ತಮ್ಮ ಅಡಗುತಾಣಗಳನ್ನಾಗಿ ಇಲ್ಲವೇ ದಾಳಿಗಳ ಸಂಚು ರೂಪಿಸುವ ಕೇಂದ್ರಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಈಜಿಪ್ಟ್ನ ಭದ್ರತಾ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಉಗ್ರರು ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.