ಈಜಿಪ್ಟ್: ಬೀದಿಗಿಳಿದ ಪ್ರತಿಭಟನಾಕಾರರು

7

ಈಜಿಪ್ಟ್: ಬೀದಿಗಿಳಿದ ಪ್ರತಿಭಟನಾಕಾರರು

Published:
Updated:
ಈಜಿಪ್ಟ್: ಬೀದಿಗಿಳಿದ ಪ್ರತಿಭಟನಾಕಾರರು

 ಕೈರೊ (ಎಎಫ್‌ಪಿ): ಇಲ್ಲಿನ ತಹ್ರೀರ್ ಚೌಕದಲ್ಲಿ ಶುಕ್ರವಾರ ಸಮಾವೇಶಗೊಂಡಿದ್ದ ಸಾವಿರಾರು ಜನರು, ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವಂತೆ ಆಡಳಿತಾರೂಢ ಸೇನೆಯನ್ನು ಆಗ್ರಹಿಸಿದರು.ಸೇನೆಯ ಬಜೆಟ್‌ನ್ನು ಸಾರ್ವಜನಿಕ ಪರಿಶೀಲನೆಯಿಂದ ಹೊರತುಪಡಿಸುವ ಸಂವಿಧಾನದ ಅಧಿನಿಯಮವನ್ನು ಒಳಗೊಂಡ ಸರ್ಕಾರಿ ಕರಡನ್ನು ವಾಪಸ್ ಪಡೆಯುವಂತೆ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.ವಿವಿಧ ಬ್ಯಾನರ್‌ಗಳ ಅಡಿ ಸೇರಿದ್ದ ರಾಜಕೀಯ ಪಕ್ಷಗಳು ಮತ್ತು ಧರ್ಮನಿರಪೇಕ್ಷ ಸಂಘಟನೆಗಳು, 2012ರ ಏಪ್ರಿಲ್‌ನ ಒಳಗೆ ಸೇನೆ ಅಧಿಕಾರ ಬಿಟ್ಟುಕೊಡಬೇಕು ಎಂದು ಕೋರಿದವು.ದೇಶದಾದ್ಯಂತ ಭುಗಿಲೆದ್ದಿದ್ದ ದಂಗೆಯು, ಸುದೀರ್ಘ ಕಾಲ ಸರ್ವಾಧಿಕಾರ ನಡೆಸಿದ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಕಳೆದ ಫೆಬ್ರುವರಿಯಲ್ಲಿ ಅಧಿಕಾರದಿಂದ ಕೆಳಗಿಳಿಸಿದ ನಂತರ ಮೊದಲ ಬಾರಿಗೆ ಸಂಸದೀಯ ಚುನಾವಣೆ ಘೋಷಣೆಯಾಗಿದೆ. ಇದೇ 28ರಿಂದ ಆರಂಭವಾಗಲಿರುವ  ಚುನಾವಣೆ, ಮಾರ್ಚ್‌ನಲ್ಲಿ ಕೊನೆಗೊಳ್ಳುವ ನಿರೀಕ್ಷೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry