ಈಜುಗೊಳದಲ್ಲಿ ಕನ್ನಡಿಗರ ಪಾರುಪತ್ಯ

7

ಈಜುಗೊಳದಲ್ಲಿ ಕನ್ನಡಿಗರ ಪಾರುಪತ್ಯ

Published:
Updated:
ಈಜುಗೊಳದಲ್ಲಿ ಕನ್ನಡಿಗರ ಪಾರುಪತ್ಯ

ರಾಂಚಿ: ಕರ್ನಾಟಕದ ‘ಚಿನ್ನದ ಮೀನು’ ಗಳಾದ ಎ.ಪಿ. ಗಗನ್ ಮತ್ತು ರೋಹಿತ್ ಪಿ ಹವಾಲ್ದಾರ್ ಇಲ್ಲಿ ನಡೆ ಯುತ್ತಿರುವ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಂಗಳವಾರ ನೂತನ ಕೂಟ ದಾಖಲೆಯೊಂದಿಗೆ ಬಂಗಾರದ ಪದಕಗಳನ್ನು ಗೆದ್ದು ಕೊಂಡರು.

 

ಇಲ್ಲಿಯ ಬುಧು ಭಗತ್ ಈಜು ಗೊಳದಲ್ಲಿ ಮಂಗಳವಾರ ಕರ್ನಾಟಕದ ಈಜುಪಟುಗಳು ಹೆಮ್ಮೆಯಿಂದ ಬೀಗಿದರು. ಪುರುಷರ 400 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ಗಗನ್ (ನೂತನ ದಾಖಲೆ: 4ನಿ,40.08ಸೆ) 2007ರಲ್ಲಿ ರೆಹಾನ್ ಪೂಂಚ್ (4ನಿ,44.32ಸೆ) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿ ಸ್ವರ್ಣ ಗೆದ್ದರು. ದೆಹಲಿಯ ಮರ್ವಿನ್ ಚಿನ್ ಮತ್ತು ಮಧ್ಯಪ್ರದೇಶದ ಸಂದೀಪ್ ಸೇಜ್ವಾಲ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. 19 ವರ್ಷದ ಗಗನ್ ಸೋಮವಾರ 1500 ಮೀಟರ್ ಫ್ರೀಸ್ಟೈಲ್‌ನಲ್ಲಿ ಸ್ವರ್ಣ ಗೆದ್ದು ಮಿಂಚಿದ್ದರು.  ರೋಹಿತ್ ಸಾಧನೆ:ಇತ್ತ ಪುರುಷರ 200 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ಕೀರ್ತಿ ಕಿರೀಟಕ್ಕೆ ಮತ್ತೊಂದು ದಾಖಲೆಯ ವಜ್ರವನ್ನು ಅಲಂಕರಿಸುವಲ್ಲಿ ರೋಹಿತ್ ಹವಾಲ್ದಾರ್ ಯಶಸ್ವಿಯಾದರು. 22 ವರ್ಷದ ರೋಹಿತ್ ( ಹೊಸದು: 4ನಿ, 40.08ಸೆ ) ರೆಹಾನ್ ಪೂಂಚ್ (4ನಿ,44.32ಸೆ)  ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ಹಾಕಿದರು.ಈ ವಿಭಾಗದ ಬೆಳ್ಳಿ ಪದಕವೂ ಅಶ್ವಿನ್ ಮೆನನ್ ಮೂಲಕ ಕರ್ನಾಟ ಕದ ಪಾಲಾಯಿತು. ಸರ್ವಿಸ್‌ಸ ನ ಪಿ.ಎಸ್. ಮಧು ಕಂಚು ಗಳಿಸಿದರು. 

ಪುರುಷರ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ಮಹಾರಾಷ್ಟ್ರದ ವೀರಧವಳ್ ಕಾಡೆ ನೂತನ ಕೂಟ ದಾಖಲೆಯೊಂದಿಗೆ ಬಂಗಾರ ಗೆದ್ದರು.ಮಹಿಳೆಯರ ವಿಭಾಗದಲ್ಲಿ ಮಂಗಳವಾರ ಬೆಳ್ಳಿ ಪದಕವೊಂದು ಕರ್ನಾಟಕದ ಪಾಲಾಯಿತು. 400 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ಪೂಜಾ ಆಳ್ವಾ ಬೆಳ್ಳಿ ಪದಕ ಗಳಿಸಿದರು. ದೆಹಲಿಯ ರಿಚಾ ಮಿಶ್ರಾ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.  ಫಲಿತಾಂಶಗಳು

ಪುರುಷರು: 400ಮೀ ವೈಯಕ್ತಿಕ ಮೆಡ್ಲೆ: ಎ.ಪಿ. ಗಗನ್ (ಕರ್ನಾಟಕ)-1, ಮರ್ವಿನ್ ಚೆನ್ (ದೆಹಲಿ)-2, ಸಂದೀಪ್ ಸೇಜ್ವಾಲ್ (ಮಧ್ಯಪ್ರದೇಶ)-3 ಕಾಲ: ಹೊಸದು: 4ನಿ, 40.08ಸೆ (ಹಳೆಯದು: 4ನಿ,44.32ಸೆ); 200ಮೀ ಬ್ಯಾಕ್ ಸ್ಟ್ರೋಕ್: ರೋಹಿತ್ ಹವಾಲ್ದಾರ್ (ಕರ್ನಾ ಟಕ)-1, ಅಶ್ವಿನ್ ಮೆನನ್ (ಕರ್ನಾ ಟಕ)-2, ಪಿ.ಎಸ್. ಮಧು (ಸರ್ವಿಸ್)-3 50ಮೀ ಫ್ರೀಸ್ಟೈಲ್: ವೀರಧವಳ್ ಖಾಡೆ (ಮಹಾರಾಷ್ಟ್ರ)-1, ಜೆ.ಪಿ. ಅರ್ಜುನ್ (ಕರ್ನಾಟಕ)-2, ಅನ್ಷುಲ್ ಕೊಠಾರಿ (ಗುಜರಾತ)-3, ಕಾಲ: 23.08ಸೆ;

ಮಹಿಳೆಯರು: 400 ಮೀ. ವೈಯಕ್ತಿಕ ಮೆಡ್ಲೆ: ರಿಚಾ ಮಿಶ್ರಾ (ದೆಹಲಿ)-1, ಪೂಜಾ ಆರ್. ಆಳ್ವಾ (ಕರ್ನಾಟಕ)-2, ಸುಶಾಕಾ ಪ್ರತಾಪ್ (ಕರ್ನಾಟಕ)-3. ನೂತನ ದಾಖಲೆ: 5ನಿ,9.47ಸೆ (ಹಳೆಯದು: 5ನಿ,9.91ಸೆ), 200ಮೀ ಬ್ಯಾಕ್‌ಸ್ಟ್ರೋಕ್: ರಿಚಾ ಮಿಶ್ರಾ (ದೆಹಲಿ)-1, ಅನನ್ಯಾ ಪಾಣಿಗ್ರಾಹಿ (ಮಹಾರಾಷ್ಟ್ರ)-2, ಆರತಿ ಘೋರ್ಪಡೆ (ಮಹಾರಾಷ್ಟ್ರ)-3, ನೂತನ ದಾಖಲೆ: 2ನಿ 26.82ಸೆ (ಹಳೆಯದು: 2ನಿ,29.34ಸೆ). 200 ಮೀ ಫ್ರೀಸ್ಟೈಲ್: ತಲಾಶಾ ಪ್ರಭು (ಗೋವಾ)-1, ರಿಚಾ ಮಿಶ್ರಾ (ದೆಹಲಿ)-2, ಎ.ವಿ. ಜಯವೀಣಾ (ತಮಿಳುನಾಡು)-3 ಕಾಲ: 27.95ಸೆಡೈವಿಂಗ್:  ಮಹಿಳೆಯರು: ಹೃತಿಕಾ ಶ್ರೀರಾಮ್ (ಮಹಾರಾಷ್ಟ್ರ)-1, ಜಾಗೃತಿ ಸತರ್ಕರ್ (ಮಹಾರಾಷ್ಟ್ರ)-2, ತನುಕಾ ಧಾರಾ (ಬಂಗಾಳ)-3 ಪಾಯಿಂಟ್: 200.95 ವಾಟರ್‌ಪೋಲೊ:  ಪುರುಷರು: ಮಣಿಪುರ ತಂಡವು 11-1ರಿಂದ ಜಾರ್ಖಂ ಡ್, ಕೇರಳ 8-4ರಿಂದ ಮಹಾರಾಷ್ಟ್ರವನ್ನು ಸೋಲಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry