ಈಜು: ಆ್ಯರನ್ ಡಿಸೋಜಾಗೆ ಚಿನ್ನದ ಪದಕ

7

ಈಜು: ಆ್ಯರನ್ ಡಿಸೋಜಾಗೆ ಚಿನ್ನದ ಪದಕ

Published:
Updated:
ಈಜು: ಆ್ಯರನ್ ಡಿಸೋಜಾಗೆ ಚಿನ್ನದ ಪದಕ

ಪುಣೆ: ಕರ್ನಾಟಕದ ಆ್ಯರನ್ ಡಿಸೋಜಾ ಇಲ್ಲಿ ನಡೆಯುತ್ತಿರುವ 66ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನ ಚಿನ್ನದ ಪದಕ ಜಯಿಸಿದರು.ಶಿವ ಛತ್ರಪತಿ ಕ್ರೀಡಾ ಸಂಕೀರ್ಣದ ಈಜುಕೊಳದಲ್ಲಿ ಗುರುವಾರ ನಡೆದ ಪುರುಷರ 200 ಮೀಟರ್ಸ್‌ ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಸಂದೀಪ್ ಸೆಜ್ವಾಲ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಅವರು ಈ ದೂರವನ್ನು 2 ನಿಮಿಷ 7.38 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.ಕರ್ನಾಟಕದ ಎಂ.ಅರವಿಂದ್ ಕಂಚು ಗೆದ್ದರು. ಮಳೆಯ ಕಾರಣ ಸ್ಪರ್ಧೆಗಳು ತಡವಾಗಿ ಆರಂಭವಾದವು. ಈ ಕಾರಣ ವಿದ್ಯುತ್ ಕೂಡ ಕೈಕೊಟ್ಟಿತ್ತು. ಹಾಗಾಗಿ ಈ ಸಮಸ್ಯೆ ಬಗೆಹರಿಯಲು ಒಂದು ಗಂಟೆ ಹಿಡಿಯಿತು.ಮಹಿಳೆಯರ 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಕರ್ನಾಟಕದ ಪೂಜಾ. ಆರ್.ಆಳ್ವಾ (2:28.30 ಸೆ.) ಚಿನ್ನದ ಪದಕ ಜಯಿಸಿದರು. ಬುಧವಾರ ಅವರು 100 ಮೀ. ಬಟರ್‌ಫ್ಲೈನಲ್ಲಿ ಚಿನ್ನ ಗೆದ್ದಿದ್ದರು.

 ಪುರುಷರ ವಿಭಾಗದ 4್ಡ100 ಮೀ.ಫ್ರೀಸ್ಟೈಲ್ ರಿಲೇನಲ್ಲಿ ಎ.ಪಿ.ಗಗನ್, ಸೌರಭ್ ಸಾಂಗ್ವೇಕರ್, ರೋಹಿತ್ ಆರ್.ಹವಾಲ್ದಾರ್ ಹಾಗೂ ಆ್ಯರನ್ ಡಿಸೋಜಾ ಅವರನ್ನೊಳಗೊಂಡ ಕರ್ನಾಟಕ ತಂಡ ಬಂಗಾರದ ಪದಕ ಜಯಿಸಿತು. ನೂತನ ಕೂಟ ದಾಖಲೆಯೊಂದಿಗೆ ಈ ಸಾಧನೆ ಮಾಡಿತು. 100 ಮೀ.ಬ್ಯಾಕ್‌ಸ್ಟ್ರೋಕ್‌ನಲ್ಲಿ ರೋಹಿತ್ ಬೆಳ್ಳಿ ಗೆದ್ದರು.ಮಹಿಳೆಯರ 1500 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಸುರಭಿ ತಿಪ್ರೆ ಬೆಳ್ಳಿ ಜಯಿಸಿದರು. ಮೊದಲ ಸ್ಥಾನ ಪೊಲೀಸ್ ತಂಡದ ರಿಚಾ ಮಿಶ್ರಾ ಅವರ ಪಾಲಾಯಿತು. ಇದು ಅವರಿಗೆ ಲಭಿಸಿದ ಐದನೇ ಚಿನ್ನದ ಪದಕ. 4್ಡ100 ಮೀ.ಫ್ರೀಸ್ಟೈಲ್ ರಿಲೇನಲ್ಲಿ ಟಿ.ಸ್ನೇಹಾ, ವಿ.ಮಾಳವಿಕಾ, ಪೂಜಾ ಹಾಗೂ ಸುರಭಿ ಅವರನ್ನೊಳಗೊಂಡ ತಂಡ ಎರಡನೇ ಸ್ಥಾನ ಗಳಿಸಿತು.ಕರ್ನಾಟಕ ತಂಡದವರು (10 ಚಿನ್ನ, 11 ಬೆಳ್ಳಿ, 7 ಕಂಚು) ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಆತಿಥೇಯ ಮಹಾರಾಷ್ಟ್ರ ತಂಡದವರು (11 ಚಿನ್ನ, 5 ಬೆಳ್ಳಿ ಹಾಗೂ 10 ಕಂಚು) ಕರ್ನಾಟಕಕ್ಕೆ ಪೈಪೋಟಿ ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry