ಗುರುವಾರ , ಜೂನ್ 24, 2021
27 °C

ಈಜು: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಆ್ಯರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಈಜುಪಟು ಆ್ಯರನ್ ಡಿಸೋಜಾ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದ್ದಾರೆ.

43ನೇ ಸಿಂಗಪುರ ರಾಷ್ಟ್ರೀಯ ಏಜ್ ಗ್ರೂಪ್ ಈಜು ಚಾಂಪಿಯನ್‌ಷಿಪ್‌ನ 200 ಮೀ.ಫ್ರೀಸ್ಟೈಲ್ ವಿಭಾಗದಲ್ಲಿ ಆ್ಯರನ್ ಗಮನ ಸೆಳೆದರು. ಬಸವನಗುಡಿ ಈಜು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅವರು ಈ ದೂರವನ್ನು 1 ನಿಮಿಷ 50.89 ಸೆಕೆಂಡ್‌ಗಳಲ್ಲಿ ತಲುಪಿದರು. ಈ ಮೂಲಕ ಒಲಿಂಪಿಕ್ಸ್‌ನ `ಬಿ~ ದರ್ಜೆಯ ಅರ್ಹತಾ ಮಟ್ಟವನ್ನು (ಒಲಿಂಪಿಕ್ಸ್ ಆಹ್ವಾನ ಸಮಯ) ಮುಟ್ಟಿದರು.

`ಈ ಸಾಧನೆ ಮಾಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಆದರೆ ಮತ್ತಷ್ಟು ಕಠಿಣ ಪ್ರಯತ್ನ ಹಾಕಬೇಕಾಗಿದೆ~ ಎಂದು ಅವರು ಹೇಳಿದ್ದಾರೆ. ಮಂಗಳವಾರ 1500 ಮೀ. ವಿಭಾಗದಲ್ಲಿ ಕರ್ನಾಟಕದ ಮತ್ತೊಬ್ಬ ಈಜುಪಟು ಸೌರಭ್ ಸಾಂಗ್ವೇಕರ್ ಕೂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.