ಶನಿವಾರ, ನವೆಂಬರ್ 23, 2019
17 °C

ಈಜು: ಕರ್ನಾಟಕದ ಲಿಖಿತ್‌ಗೆ ಕಂಚು

Published:
Updated:

ಬೆಂಗಳೂರು: ಕರ್ನಾಟಕದ ಎಸ್.ಪಿ. ಲಿಖಿತ್ ಇಸ್ರೇಲ್‌ನಲ್ಲಿ ಏಪ್ರಿಲ್ 7ರಿಂದ 12ರ ವರೆಗೆ ನಡೆದ ಐಎಸ್‌ಎಫ್ ವಿಶ್ವ ಈಜು ಚಾಂಪಿಯನ್‌ಷಿಪ್‌ನ 100ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.14ರಿಂದ 17 ವರ್ಷದೊಳಗಿನವರ ವಿಭಾಗದ ಸ್ಪರ್ಧೆಯಲ್ಲಿ ಲಿಖಿತ್ ಒಂದು ನಿಮಿಷ 8:40ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದರು. ಚೀನಾದ ಲುಯಿ ಯೊನ್ಸಂಗ್ (ಕಾಲ: 1:07.40ಸೆ.) ಚಿನ್ನ ಗೆದ್ದರೆ, ಜರ್ಮನಿಯ ಡೊಮಿನಿಕೊ ಆರ್ಥನ್ (ಕಾಲ: 1:07.94ಸೆ.) ಚಿನ್ನ ಗೆದ್ದುಕೊಂಡರು.4*50 ಮೆಡ್ಲೆ ರಿಲೇಯಲ್ಲಿ ಲಿಖಿತ್, ರೋಹಿತ್, ರಕ್ಷಿತ್ ಶೆಟ್ಟಿ ಮತ್ತು ನೈಲ್ ಕಾಂಟ್ರ್ಯಾಕ್ಟರ್ ಅವರನ್ನೊಳಗೊಂಡ ಭಾರತ ತಂಡ ಕಂಚು ಜಯಿಸಿತು. ಈ ತಂಡ ನಿಗದಿತ ಗುರಿಯನ್ನು ಒಂದು ನಿಮಿಷ 50.40 ಸೆಕೆಂಡ್‌ಗಳಲ್ಲಿ ತಲುಪಿತು.

ಪ್ರತಿಕ್ರಿಯಿಸಿ (+)