ಈಜು: ಬಸವನಗುಡಿ ಈಜು ಕೇಂದ್ರಕ್ಕೆ ಸಮಗ್ರ ಚಾಂಪಿಯನ್ ಪಟ್ಟ...

7

ಈಜು: ಬಸವನಗುಡಿ ಈಜು ಕೇಂದ್ರಕ್ಕೆ ಸಮಗ್ರ ಚಾಂಪಿಯನ್ ಪಟ್ಟ...

Published:
Updated:
ಈಜು: ಬಸವನಗುಡಿ ಈಜು ಕೇಂದ್ರಕ್ಕೆ ಸಮಗ್ರ ಚಾಂಪಿಯನ್ ಪಟ್ಟ...

ಬೆಂಗಳೂರು: ಬಸವನಗುಡಿ ಈಜು ಕೇಂದ್ರದ (ಬಿಎಸಿ) ಆ್ಯರನ್ ಡಿಸೋಜಾ ಹಾಗೂ ಸುರಭಿ ಥಿಪ್ರೆ ಬುಧವಾರ ಇಲ್ಲಿ ಕೊನೆಗೊಂಡ ಕರ್ನಾಟಕ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಈಜುಪಟು ಎನಿಸಿದರು. ಬಸವನಗುಡಿ ಈಜು ಕೇಂದ್ರ ತಂಡ 681 ಪಾಯಿಂಟ್‌ಗಳೊಂದಿಗೆ ಮತ್ತೆ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಮೂರು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಆ್ಯರನ್ ಒಟ್ಟು 581 ಪಾಯಿಂಟ್ ಕಲೆಹಾಕಿ ಈ ಸಾಧನೆ ಮಾಡಿದರು. ಸುರಭಿ ಒಟ್ಟು 685 ಪಾಯಿಂಟ್ ಸಂಗ್ರಹಿಸಿದರು. 

 

ಕೊನೆಯ ದಿನ  200 ಮೀ.ಬ್ಯಾಕ್‌ಸ್ಟ್ರೋಕ್‌ನಲ್ಲಿ ಡಾಲ್ಫಿನ್ ತಂಡದ ರೋಹಿತ್ ಆರ್.ಹವಾಲ್ದಾರ್ (2:07.66) ನೂತನ ಕೂಟ ದಾಖಲೆ ನಿರ್ಮಿಸಿದರು. 2009ರಲ್ಲಿ ನಿರ್ಮಿಸಿದ್ದ ತಮ್ಮದೇ ದಾಖಲೆ (2:09.58) ಅಳಿಸಿ ಹಾಕಿದರು. 400 ಮೀ.ಫ್ರೀಸ್ಟೈಲ್‌ನಲ್ಲಿ ಸುರಭಿ ಥಿಪ್ರೆ (4:36.04) ಕೂಡ ನೂತನ ಕೂಟ ದಾಖಲೆ ನಿರ್ಮಿಸಿದರು.ಅಕ್ಟೋಬರ್ 10ರಂದು ಜಕಾರ್ತದಲ್ಲಿ ಆರಂಭವಾಗಲಿರುವ ಏಷ್ಯನ್ ಏಜ್ ಗ್ರೂಪ್ ಈಜು ಚಾಂಪಿಯನ್‌ಷಿಪ್ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಮಹತ್ವ ಪಡೆದುಕೊಂಡಿತ್ತು. ಆ ಚಾಂಪಿಯನ್‌ಷಿಪ್ ಒಲಿಂಪಿಕ್ಸ್‌ಗೆ ಅರ್ಹತಾ ಗಿಟ್ಟಿಸಲು ಪ್ರಮುಖ ವೇದಿಕೆಯಾಗಿದೆ.ಫಲಿತಾಂಶ ಇಂತಿವೆ: ಪುರುಷರ ವಿಭಾಗ: 100 ಮೀ. ಫ್ರೀಸ್ಟೈಲ್: ಆ್ಯರನ್ ಡಿಸೋಜಾ (ಬಿಎಸಿ; 0:41.83)-1, ಅಶ್ವಿನ್ ಮೆನನ್ (ಡಾಲ್ಫಿನ್; 0:53.94)-2, ರೋಹಿತ್ ಆರ್.ಹವಾಲ್ದಾರ್ (ಡಾಲ್ಫಿನ್; 0:54.10)-3. 400 ಮೀ.ಫ್ರೀಸ್ಟೈಲ್: ಎ.ಪಿ.ಗಗನ್ (ಬಿಎಸಿ; 4:03.86)-1, ಸೌರಭ್ ಸಾಂಗ್ವೇಕರ್ (ಬಿಎಸಿ; 4: 08.94)-2, ಎ.ಅಜಯ್ (ಬಿಎಸಿ; 4:22.82)-3. 50 ಮೀ.ಬ್ಯಾಕ್ ಸ್ಟ್ರೋಕ್ : ರೋಹಿತ್ಆರ್.ಹವಾಲ್ದಾರ್ (ಡಾಲ್ಫಿನ್; 0:28.52)-1, ಆ್ಯರನ್ ಡಿಸೋಜಾ (ಬಿಎಸಿ; 0:28.62)-2, ಎನ್.ಎ.ಸಂದೀಪ್ (ಬಿಎಸಿ; 0:28.70)-3. 200 ಮೀ.ಬಟರ್‌ಫ್ಲೈ: ರೆಹಾನ್ ಪೂಂಚಾ (ಬಿಎಸಿ; 2:06.75)-1, ಆ್ಯರನ್ ಡಿಸೋಜಾ (ಬಿಎಸಿ; 2:06.85)-2, ಮಿತೇಶ್ ಎಂ.ಕುಂಟೆ (ಬಿಎಸಿ; 2:17.61)-3. 200 ಮೀ.ಬ್ಯಾಕ್‌ಸ್ಟ್ರೋಕ್: ರೋಹಿತ್ ಆರ್.ಹವಾಲ್ದಾರ್ (ಡಾಲ್ಫಿನ್; 2:07.66)-1, ರೆಹಾನ್ ಪೂಂಚಾ (ಬಿಎಸಿ; 2:09.17)-2, ಬಿ.ಪ್ರಣಾಮ್ (ಬಿಎಸಿ; 2:18.45)-3. 4್ಡ100 ಮೆಡ್ಲೆರಿಲೇ: ಬಿಎಸಿ (ರೆಹಾನ್ ಪೂಂಚಾ, ಎಸ್.ಪಿ.ಲಿಖಿತಾ, ಆ್ಯರನ್ ಡಿಸೋಜಾ, ಎ.ಪಿ.ಗಗನ್; 4:11.70)-1, ಬಿಎಸಿ `ಬಿ~    (ಬಿ.ಪ್ರಣಾಮ್, ಎಂ.ಅರವಿಂದ್,   ಸೌರಭ್ ಸಾಂಗ್ವೇಕರ್,    ಎ.ಅಜಯ್; 4:17.35)-2.

ಮಹಿಳೆಯರ ವಿಭಾಗ: 400 ಮೀ.ಫ್ರೀಸ್ಟೈಲ್: ಸುರಭಿ ಥಿಪ್ರೆ (ಬಿಎಸಿ; 4:36.04)-1, ಕ್ಷಿಪ್ರ ಮಹಾಜನ್ (ಬಿಎಸಿ; 4:48.29)-2, ಪ್ರತಿಮಾ ಕೊಳಲಿ (ಡಾಲ್ಫಿನ್; 4:49.49)-3. 50 ಮೀ.ಬ್ಯಾಕ್ ಸ್ಟ್ರೋಕ್: ಫರಿಹಾ ಜಮಾನ್ (ಬಿಎಸಿ; 0:33.89)-1, ಮೇಘನಾ ಶ್ರೀವತ್ಸ (ಬಿಎಸಿ; 0:35.08)-2, ದಾಮಿನಿ ಕೆ.ಗೌಡ (ಬಿಎಸಿ; 0:35.38)-3. 200 ಮೀ. ಬಟರ್‌ಫ್ಲೈ: ಪೂಜಾ ಆರ್.ಆಳ್ವಾ (ಬಿಎಸಿ; 2:35.50)-1, ಡಿ.ಎಂ.ಸಿಮ್ರಾನ್(ಬಿಎಸಿ; 2:39.52)-2. 200 ಮೀ.ಬ್ಯಾಕ್ ಸ್ಟ್ರೋಕ್: ಮೇಘನಾ ಶ್ರೀವತ್ಸ (ಬಿಎಸಿ; 2:38.72)-1, ವಿ.ಶರಣ್ಯ (ಬಿಎಸಿ; 2:48.10)-2, ತುಳಸಿ ಆರ್.ಹರಿತ್ಸಾ (ಬಿಎಸಿ; 2:51.35)-3. 100 ಮೀ.ಫ್ರೀಸ್ಟೈಲ್: ಸುರಭಿ ಥಿಪ್ರೆ (ಬಿಎಸಿ; 1:00.55)-1, ಕ್ಷಿಪ್ರ ಮಹಾಜನ್ (ಬಿಎಸಿ; 1:01.20)-2, ಟಿ.ಸ್ನೇಹಾ (ಬಿಎಸಿ; 1:02.37)-3. 4್ಡ100 ಮೀ.ಮೆಡ್ಲೆ ರಿಲೇ: ಬಿಎಸಿ `ಬಿ~ (ವಿ.ಶರಣ್ಯ, ಚಾರು ಹಂಸಿನಿ, ಶ್ರೀಕಾ.ಕೆ.ರಾಜು, ವಿ.ಮಾಳವಿಕಾ; 5:07.22)-1, ಬಿಎಸಿ `ಎ~ (ಮೇಘನಾ ಶ್ರೀವತ್ಸ, ಕೀರ್ತನಾ, ದಾಮಿನಿ ಕೆ.ಗೌಡ, ತುಳಸಿ ಆರ್.ಹರ್ಷಿತಾ;~ 5:10.99)-2. 

 

ಅತ್ಯುತ್ತಮ ಈಜುಪಟುಗಳು: ಪುರುಷರ ವಿಭಾಗ: ಆ್ಯರನ್ ಡಿಸೋಜಾ (ಬಿಎಸಿ; 581 ಪಾಯಿಂಟ್ಸ್). ಮಹಿಳೆಯರ ವಿಭಾಗ: ಸುರಭಿ ಥಿಪ್ರೆ (ಬಿಎಸಿ; 685 ಪಾಯಿಂಟ್ಸ್).ಡೈವಿಂಗ್ ವಿಭಾಗ: ಅಂಕಿತ್ ದತ್ತ (ಡ್ಯಾಜಲ್ ಅಕ್ವೆಟಿಕ್ ಕ್ಲಬ್; 17 ಪಾಯಿಂಟ್ಸ್). ಕರಿಷ್ಮಾ ಎಂ.ಮೋಹಿತೆ (ವೈಸಿಎಸ್‌ಸಿ; 14 ಪಾಯಿಂಟ್ಸ್). ಸಮಗ್ರ ಚಾಂಪಿಯನ್: ಬಸವನಗುಡಿ ಈಜು ಕೇಂದ್ರ (681 ಪಾಯಿಂಟ್ಸ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry