ಈಜು: ಭಾರತಕ್ಕೆ ಐದು ಚಿನ್ನ

7

ಈಜು: ಭಾರತಕ್ಕೆ ಐದು ಚಿನ್ನ

Published:
Updated:

ನವದೆಹಲಿ (ಪಿಟಿಐ): ಭಾರತದ ಈಜು ಸ್ಪರ್ಧಿಗಳು ಜಕಾರ್ತಾದಲ್ಲಿ ನಡೆಯುತ್ತಿರುವ ಏಳನೇ ಏಷ್ಯನ್ ವಯೋವರ್ಗದ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಐದು ಚಿನ್ನದ ಪದಕ ಗೆದ್ದಿದ್ದಾರೆ.

ವೀರ್‌ಧವಳ್ ಖಾಡೆ ಅವರು 50 ಮೀ. ಬಟರ್‌ಫ್ಲೈ (ಕಾಲ: 0:24.74 ಸೆ), 100 ಮೀ. ಬಟರ್‌ಫ್ಲೈ (54:86 ಸೆ.) ಹಾಗೂ 4ಗಿ100 ಮೀ. ಫ್ರೀಸ್ಟೈಲ್ ರಿಲೆ ಯಲ್ಲಿ ಬಂಗಾರ ಗೆದ್ದರು. ಆ್ಯರನ್ ಡಿಸೋಜ, ಅಂಶುಲ್ ಕೋಠಾರಿ ಹಾಗೂ ರೇಹಾನ್ ಪೂಂಚ ಅವರು ಕೂಡ ರಿಲೆ ತಂಡದ ಸದಸ್ಯರಾಗಿದ್ದಾರೆ.

ರೇಹಾನ್ ಅವರು 200 ಮೀ. ವೈಯಕ್ತಿಕ ಮೆಡ್ಲೆ(02:06.82 ಸೆ.)ಯಲ್ಲಿ ಹಾಗೂ ಸಂದೀಪ್ ಸೇಜ್ವಾಲ್ ಅವರು 50 ಮೀ. ಬ್ರೆಸ್ಟ್ ಸ್ಟ್ರೋಕ್ (28:36 ಸೆ.) ಸ್ಪರ್ಧೆಯಲ್ಲಿ ಅಗ್ರಸ್ಥಾನದ ಗೌರವಕ್ಕೆ ಪಾತ್ರರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry