ಈಜು: ಮಿಂಚಿದ ಮಾಳವಿಕಾ, ಶ್ರದ್ಧಾ

7

ಈಜು: ಮಿಂಚಿದ ಮಾಳವಿಕಾ, ಶ್ರದ್ಧಾ

Published:
Updated:

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ ವಿ. ಮಾಳವಿಕಾ ಮತ್ತು ಶ್ರದ್ಧಾ ಸುಧೀರ್ ಇಲ್ಲಿ ಆರಂಭವಾದ 13ನೇ ರಾಜ್ಯ ಜೂನಿಯರ್ ಶಾರ್ಟ್‌ಕೋರ್ಸ್ ಈಜು ಚಾಂಪಿಯನ್‌ಷಿಪ್‌ನ ಮೊದಲ ದಿನ ಗಮನ ಸೆಳೆದರು.ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಸ್ಪರ್ಧೆಗಳಲ್ಲಿ ಮಾಳವಿಕಾ ಬಾಲಕಿಯರ `ಗುಂಪು 2' ರ ವಿಭಾಗದಲ್ಲಿ ಮೂರು ಚಿನ್ನ ಗೆದ್ದರು. 100 ಮೀ. ಫ್ರೀಸ್ಟೈಲ್ (1:00.92ಸೆ.), 200 ಮೀ. ಫ್ರೀಸ್ಟೈಲ್ (2:11.02 ಸೆ.) ಮತ್ತು 800 ಮೀ. ಫ್ರೀಸ್ಟೈಲ್ (9:40.87 ಸೆ.) ಅವರು ಅಗ್ರಸ್ಥಾನ ಪಡೆದರು. `ಗುಂಪು 2' ರಲ್ಲಿ ಸ್ಪರ್ಧಿಸಿದ ಶ್ರದ್ಧಾ 200 ಮೀ. ಬ್ಯಾಕ್‌ಸ್ಟ್ರೋಕ್ (2:43.41 ಸೆ.) ಹಾಗೂ 200 ಮೀ. ವೈಯಕ್ತಿಕ ಮೆಡ್ಲೆ (2:41.50 ಸೆ.) ಬಂಗಾರ ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry