ಈಜು: ರೋಹಿತ್ ದಾಖಲೆ

7

ಈಜು: ರೋಹಿತ್ ದಾಖಲೆ

Published:
Updated:

ಕೋಲ್ಕತ್ತ: ಬೆಂಗಳೂರು ವಿಶ್ವವಿದ್ಯಾಲಯದ ರೋಹಿತ್ ಆರ್. ಹವಾಲ್ದಾರ್ ಅವರು ಇಲ್ಲಿ ಆರಂಭವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್‌ಷಿಪ್‌ನ 200ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ದಾಖಲೆ ಸಮೇತ ಚಿನ್ನದ ಪದಕ ಜಯಿಸಿದರು.ಸೋಮವಾರ ನಡೆದ ಸ್ಪರ್ಧೆಯಲ್ಲಿ ನಿಗದಿತ ಅಂತರವನ್ನು ಅವರು 2.08.93ಸಕೆಂಡ್‌ಗಳಲ್ಲಿ ಮುಟ್ಟಿದರು. ಈ ಮೊದಲು 2:09.50ಸೆ. ಗಳಲ್ಲಿ ಮುಟ್ಟಿದ ದಾಖಲೆ ಇತ್ತು. ಇದನ್ನು ರೋಹಿತ್ ಮುರಿದರು.ಫಲಿತಾಂಶಗಳು ಇಂತಿವೆ: ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದವರು:  200ಮೀ. ಬ್ಯಾಕ್ ಸ್ಟ್ರೋಕ್: ರೋಹಿತ್ ಆರ್. ಹವಲ್ದಾರ್ (ಕಾಲ: 2.08.93ಸಕೆಂಡ್, ಬೆಂಗಳೂರು ವಿಶ್ವವಿದ್ಯಾಲಯ);  200ಮೀ. ಬ್ರೆಸ್ಟ್ ಸ್ಟ್ರೋಕ್: ಎ.ಪಿ. ಗಗನ್ (ಜೈನ್ ವಿ.ವಿ.); 50ಮೀ. ಬಟರ್ ಫ್ಲೈ: ಅರುಣ್ ಡಿಸೋಜಾ (ಕಾಲ: 26.37ಸ, ಬೆಂಗಳೂರು ವಿ.ವಿ.); 4ಷ100ಮೀ. ಮೆಡ್ಲ್ ರಿಲೇ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.ಮಹಿಳೆಯರ ವಿಭಾಗ: 200ಮೀ. ಬ್ರೆಸ್ಟ್ ಸ್ಟ್ರೋಕ್: ಪೂರ್ವ ಶೆಟ್ಟಿ (ಕಾಲ: 2:34.62ಸ, ಜೈನ್ ವಿ.ವಿ.), 50ಮೀ ಬಟರ್ ಫ್ಲೇ: ಪೂಜಾ ಆರ್. ಆಳ್ವಾ (ಕಾಲ: ವಿಟಿಯು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry