ಈಜು: ಸೌರಭ್‌ಗೆ ಬಂಗಾರ

7

ಈಜು: ಸೌರಭ್‌ಗೆ ಬಂಗಾರ

Published:
Updated:
ಈಜು: ಸೌರಭ್‌ಗೆ ಬಂಗಾರ

ಪುಣೆ: ಕರ್ನಾಟಕದ ಸೌರಭ್ ಸಾಂಗ್ವೇಕರ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ಪುರುಷರ 800 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.ಸೋಮವಾರ ನಡೆದ ಸ್ಪರ್ಧೆಯಲ್ಲಿ ಸೌರಭ್ 8 ನಿಮಿಷ 21.28 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಕರ್ನಾಟಕದವರೇ ಆದ ಒಲಿಂಪಿಯನ್ ಎ.ಪಿ. ಗಗನ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅವರು 8:23.86 ಸೆ.ಗಳಲ್ಲಿ ಗುರಿ ತಲುಪಿದರು. ಸೌರಭ್ ಮತ್ತು ಗಗನ್ ನಡುವೆ ತುರುಸಿನ ಪೈಪೋಟಿ ಕಂಡುಬಂತು. ಕೊನೆಯ 200 ಮೀ. ಇರುವಾಗ ಸೌರಭ್ ಸ್ಪಷ್ಟ ಮುನ್ನಡೆ ಪಡೆದರು.ಮೊದಲ ದಿನ ಕರ್ನಾಟಕ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚು ಜಯಿಸಿತು. ರೋಹಿತ್ ಆರ್. ಹವಾಲ್ದಾರ್ ರಾಜ್ಯಕ್ಕೆ ದಿನದ ಎರಡನೇ ಚಿನ್ನ ತಂದಿತ್ತರು. ಅವರು ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 2:11.06 ಸೆ.ಗಳಲ್ಲಿ ಗುರಿ ಕ್ರಮಿಸಿದರು. ಬಿ. ಪ್ರಣಾಮ್ ಈ ವಿಭಾಗದಲ್ಲಿ ರಾಜ್ಯಕ್ಕೆ ಕಂಚು ತಂದಿತ್ತರು.ಆರ್‌ಎಸ್‌ಪಿಬಿಯ ಸಂದೀಪ್ ಸೆಜ್ವಾಲ್ ಪುರುಷರ 200 ಮೀ.    ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿದರು. ಆರ್‌ಎಸ್‌ಪಿಬಿ ರಿಲೇ ತಂಡ ಕೂಡಾ ಕೂಟ ದಾಖಲೆ ಸ್ಥಾಪಿಸಿತು.

ವಾಟರ್ ಪೋಲೊ ಸ್ಪರ್ಧೆಯಲ್ಲಿ ಕರ್ನಾಟಕ ಮಹಿಳಾ ತಂಡ 4-1 ರಲ್ಲಿ ಪೊಲೀಸ್ ವಿರುದ್ಧ ಗೆದ್ದರೆ, ಪುರುಷರು 0-4 ರಲ್ಲಿ ಪಂಜಾಬ್ ಕೈಯಲ್ಲಿ ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry