ಈಜು: ಸೌರಭ್, ಆಕಾಶ್ ರೋಹಿತ್‌ಗೆ ಚಿನ್ನ

7

ಈಜು: ಸೌರಭ್, ಆಕಾಶ್ ರೋಹಿತ್‌ಗೆ ಚಿನ್ನ

Published:
Updated:
ಈಜು: ಸೌರಭ್, ಆಕಾಶ್ ರೋಹಿತ್‌ಗೆ ಚಿನ್ನ

ಭೋಪಾಲ್: ಮಿಂಚಿನ ಪ್ರದರ್ಶನ ಮುಂದುವರಿಸಿದ ಕರ್ನಾಟಕದ ಸೌರಭ್ ಸಾಂಗ್ವೇಕರ್ ಅವರು ಇಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಚಿನ್ನದ ಪದಕ ಗೆದ್ದರು.ಪ್ರಕಾಶ್ ಕರಣ್ ಪುಷ್ಕರ್ ಈಜುಕೊಳದಲ್ಲಿ ಸೋಮವಾರ ನಡೆದ ಬಾಲಕರ `ಗುಂಪು 1~ರ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಅವರು 4:06.62 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮಹಾರಾಷ್ಟ್ರ ಮೂಲದ ಸೌರಭ್ ಈ ಮೊದಲು 1500 ಮೀ. ಮತ್ತು 200 ಮೀ. ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಬಂಗಾರ ಜಯಿಸಿದ್ದರು. ಈ ಮೂಲಕ ತಾನೊಬ್ಬ ಶ್ರೇಷ್ಠ ಫ್ರೀಸ್ಠೈಲ್ ಈಜು ಸ್ಪರ್ಧಿ ಎಂಬುದನ್ನು ಅವರು ತೋರಿಸಿಕೊಟ್ಟರು.ಬಿ. ಪ್ರಣಾಮ್ 200 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 2:14.73 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ಅವರಿಗೆ ಗುಜರಾತ್‌ನ ಸುಜಯ್ ಶಾ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು.`ಬ್ರೆಸ್ಟ್‌ಸ್ಟ್ರೋಕ್ ಸ್ಪೆಶಲಿಸ್ಟ್~ ಆಕಾಶ್ ರೋಹಿತ್ 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದ ಸ್ಪರ್ಧೆಯಲ್ಲಿ 2:16.67 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬಂಗಾರ ತಮ್ಮದಾಗಿಸಿಕೊಂಡರು.ಸೌರಭ್, ಪ್ರಣಾಮ್ ಮತ್ತು ಆಕಾಶ್ ರೋಹಿತ್ ಅವರು ತಲಾ ಮೂರು ಬಂಗಾರ ಜಯಿಸಿದ್ದಾರೆ. ಇದರಿಂದ ಕರ್ನಾಟಕ ಸಮಗ್ರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನ ಒಟ್ಟು ನಾಲ್ಕು ರಾಷ್ಟ್ರೀಯ ದಾಖಲೆಗಳು ನಿರ್ಮಾಣವಾದವು.ಕರ್ನಾಟಕ ಇದೀಗ ಒಟ್ಟು 407 ಪಾಯಿಂಟ್‌ಗಳೊಂದಿಗೆ (18 ಚಿನ್ನ, 16 ಬೆಳ್ಳಿ, 20 ಕಂಚು) ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿ ಕೊಂಡಿದೆ. ತಮಿಳುನಾಡು (348 ಪಾಯಿಂಟ್) ಎರಡನೇ ಸ್ಥಾನದಲ್ಲಿದರೆ, ಮಹಾರಾಷ್ಟ್ರ (338) ಮೂರನೇ ಸ್ಥಾನದಲ್ಲಿದೆ. ಆದರೆ ಅತ್ಯಧಿಕ ಚಿನ್ನದ ಪದಕ (20) ಮಹಾರಾಷ್ಟ್ರ ಗೆದ್ದುಕೊಂಡಿದೆ.ಫಲಿತಾಂಶ: ಬಾಲಕರ ವಿಭಾಗ: ಗುಂಪು 1:

400 ಮೀ. ಫ್ರೀಸ್ಟೈಲ್: ಸೌರಭ್ ಸಾಂಗ್ವೇಕರ್ (ಕರ್ನಾಟಕ)-1, ಸಾನು ದೇವನಾಥ್ (ಪಶ್ಚಿಮ ಬಂಗಾಳ)-2, ಜಯವಂತ್ ವಿಜಯ್ ಕುಮಾರ್ (ತಮಿಳುನಾಡು)-3, ಕಾಲ: 4:06.62 ಸೆ. 200 ಮೀ. ಬ್ಯಾಕ್‌ಸ್ಟ್ರೋಕ್: ಬಿ. ಪ್ರಣಾಮ್ (ಕರ್ನಾಟಕ)-1, ಸುಜಯ್ ಶಾ (ಗುಜರಾತ್)-2, ಎಂ. ಅರವಿಂದ್ (ಕರ್ನಾಟಕ)-3, ಕಾಲ: 2:14.73 ಸೆ. 50 ಮೀ. ಬಟರ್‌ಫ್ಲೈ: ಅಮನ್ ಘಾಯ್ (ಪಂಜಾಬ್)-1, ರಾಹುಲ್ ಚೊಕ್ಷಿ (ಗುಜರಾತ್)-2, ರಕ್ಷಿತ್ ಯು. ಶೆಟ್ಟಿ (ಕರ್ನಾಟಕ)-3, ಕಾಲ: 26.62 ಸೆ. 200 ಮೀ. ವೈಯಕ್ತಿಕ ಮೆಡ್ಲೆ: ಆಕಾಶ್ ರೋಹಿತ್ (ಕರ್ನಾಟಕ)-1, ರಾಹುಲ್ ಚೊಕ್ಷಿ (ಗುಜರಾತ್)-2, ಜಯಂತ್ ಎಂ. (ದೆಹಲಿ)-3, ಕಾಲ: 2:16.67 ಸೆ.ಗುಂಪು 2: 400 ಮೀ. ಫ್ರೀಸ್ಟೈಲ್: ವೇದಾಂತ್ ರಾವ್ (ಮಹಾರಾಷ್ಟ್ರ)-1, ಮೊಹಮ್ಮದ್ ಯಾಕೂಬ್ ಸಲೀಮ್ (ಕರ್ನಾಟಕ)-2, ರೋಹಿತಾಶ್ ದುಬೆ (ಮಧ್ಯಪ್ರದೇಶ)-3, ಕಾಲ: 4:29.72 ಸೆ.ಬಾಲಕಿಯರ ವಿಭಾಗ: ಗುಂಪು 1: 800 ಮೀ. ಫ್ರೀಸ್ಟೈಲ್: ಅನುಷಾ ಮೆಹ್ತಾ (ತಮಿಳುನಾಡು)-1, ಪ್ರತಿಮಾ ಕೆ. (ಕರ್ನಾಟಕ)-2, ಶ್ರೀಲಕ್ಷ್ಮಿ ಗೊರೂರ್ (ಕರ್ನಾಟಕ)-3, ಕಾಲ: 9:42.73 ಸೆ. 200 ಮೀ. ಬ್ಯಾಕ್‌ಸ್ಟ್ರೋಕ್: ಅನನ್ಯಾ ಪಾಣಿಗ್ರಹಿ (ಮಹಾರಾಷ್ಟ್ರ)-1, ಆರ್. ಸುಷ್ಮಿತಾ (ತಮಿಳುನಾಡು)-2,  ಮೇಘನಾ ಶ್ರೀವತ್ಸ (ಕರ್ನಾಟಕ)-3, ಕಾಲ: 2:28.83 ಸೆ. 50 ಮೀ. ಬಟರ್‌ಫ್ಲೈ: ಜ್ಯೋತ್ಸ್ನಾ ಪನ್ಸಾರೆ (ಮಹಾರಾಷ್ಟ್ರ)-1, ಅರ್ಹತಾ ಮಾಘವಿ (ಕರ್ನಾಟಕ)-2, ಎಂ. ರಾಘವಿ (ತಮಿಳುನಾಡು)-3, ಕಾಲ: 29.39 ಸೆ.ಗುಂಪು 2: 1500 ಮೀ. ಫ್ರೀಸ್ಟೈಲ್: ಆಕಾಂಕ್ಷಾ ವೋರಾ (ಮಹಾರಾಷ್ಟ್ರ)-1, ಆಶ್ರಿತಾ ಎನ್ ಭಾರದ್ವಾಜ್ (ಕರ್ನಾಟಕ)-2, ವಿ. ಮಾಳವಿಕಾ (ಕರ್ನಾಟಕ)-3, ಕಾಲ: 18:50.11 ಸೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry