ಈಜು: ಸ್ಫೂರ್ತಿ, ಸೂರಜ್ ಪಾರಮ್ಯ

7
ಗ್ಲೋಬಲ್ ಕಾಲೇಜು ವಿದ್ಯಾರ್ಥಿನಿಗೆ ಎಂಟು ಸ್ಪರ್ಧೆಯಲ್ಲೂ ಅಗ್ರಸ್ಥಾನ

ಈಜು: ಸ್ಫೂರ್ತಿ, ಸೂರಜ್ ಪಾರಮ್ಯ

Published:
Updated:

ಹುಬ್ಬಳ್ಳಿ: ಮೀನಿನಂತೆ ಸರಾಗವಾಗಿ ಸಾಗುತ್ತ ಉತ್ತಮ ಪ್ರದರ್ಶನ ನೀಡಿದ ಗ್ಲೋಬಲ್ ಕಾಲೇಜು ವಿದ್ಯಾರ್ಥಿನಿ ಸ್ಪೂರ್ತಿ ಪಾಟೀಲ ಇಲ್ಲಿನ ಈಜುಕೊಳ ದಲ್ಲಿ ಮಂಗಳವಾರ ಆರಂಭವಾದ ಕರ್ನಾಟಕ ವಿವಿ ಮಟ್ಟದ  ಅಂತರ ಕಾಲೇಜು ಈಜು ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಪಾರಮ್ಯ ಮೆರೆದರು.ನವೀಕೃತಗೊಂಡು ಕಂಗೊಳಿ ಸುತ್ತಿರುವ ಈಜುಕೊಳದಲ್ಲಿ ರಾಜನಗರ ಪ್ರಥಮ ದರ್ಜೆ ಕಾಲೇಜು ಸಹಯೋಗ ದಲ್ಲಿ ಆಯೋಜಿಸಿರುವ ಸ್ಪರ್ಧೆಯ ಮೊದಲ ದಿನದ ಎಂಟು ಸ್ಪರ್ಧೆಗಳಲ್ಲೂ ಅಗ್ರಸ್ಥಾನ ಪಡೆದದ್ದು ಸ್ಪೂರ್ತಿ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿತ್ತು. 100 ಫ್ರೀಸ್ಟೈಲ್ ಅನ್ನು 1 ನಿಮಿಷ 31.92 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಗೆಲುವಿನ ಆರಂಭಿಸಿದ ಸ್ಪೂರ್ತಿ, 400 ಮೀಟರ್ ಫ್ರೀಸ್ಟೈಲ್ ಅನ್ನು ತಾವೊಬ್ಬರೇ 7 ನಿಮಿಷ 10.14 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.ಧಾರವಾಡದ ಕೆಯುಎಸ್ ಕಾನೂನು ಕಾಲೇಜಿನ ಯು.ಪಿ. ಸಂಜಿತಾ ಹಾಗೂ ಕಾರವಾರದ ಸ್ನಾತಕೋತ್ತರ ಕೇಂದ್ರದ ಸುಜಾತ ನಿರ್ಲೇಕರ್ ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಿದರು. ಕಾರವಾರದ ಶಿವಾಜಿ ಕಾಲೇಜಿನ ಪೂಜಾ ಕಟ್ಟಿಮನಿ ತಾವು ಪಾಲ್ಗೊಂಡ ಸ್ಪರ್ಧೆಗಳಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಪುರುಷರ ವಿಭಾಗದಲ್ಲಿ ಕೊಂಚ ಸ್ಪರ್ಧೆ ಕಂಡುಬಂತು. ಧಾರವಾಡದ ಪಿ.ಜಿ. ಜಿಮ್ಖಾನಾ ತಂಡದ ಸೂರಜ್ ಶ್ರೇಷ್ಠಿ 50 ಮೀ. ಬ್ರೆಸ್ಟ್ ಸ್ಟ್ರೋಕ್, 200 ಮೀಟರ್ ಬ್ರೆಸ್ಟ್ ಸ್ಟ್ರೋಕ್, 200 ಮೀ. ಫ್ರೀಸ್ಟೈಲ್, 200 ಮೀ. ಇಂಡಿವಿಜಲ್ ಮೆಡ್ಲೆ, 400 ಮೀ ಫ್ರೀಸ್ಟ್ರೈಲ್‌ನಲ್ಲಿ ಅಗ್ರಸ್ಥಾನ ಪಡೆದರು.ಅದೇ ತಂಡದ ಅಂಕುಶ್ ಕನಬರ್ಕರ್ 50 ಮೀ ಬ್ಯಾಕ್ ಸ್ಟ್ರೋಕ್, 100 ಮೀ ಬ್ಯಾಕ್ ಸ್ಟ್ರೋಕ್‌ಪುರುಷರ 4/100 ಮೆಡ್ಲೆ ರಿಲೆನಲ್ಲಿ ಧಾರವಾಡ ಪಿ.ಜಿ. ಜಿಮ್ಖಾನ ತಂಡ ಮೊದಲ ಸ್ಥಾನ ಪಡೆಯಿತು.

ಉಳಿದ ತಂಡಗಳು ನಿಗದಿತ ಅವಧಿಯಲ್ಲಿ ಗುರಿಮುಟ್ಟದ ಕಾರಣ ಸ್ಪರ್ಧೆಯಿಂದ ಅನರ್ಹಗೊಂಡವು.ಫಲಿತಾಂಶ

ಮಹಿಳೆಯರು: 100 ಮೀ ಫ್ರೀಸ್ಟೈಲ್: ಸ್ಪೂರ್ತಿ ಪಾಟೀಲ (ಗ್ಲೋಬಲ್ ಕಾಲೇಜು, ಹುಬ್ಬಳ್ಳಿ)- 1. ಯು.ಪಿ. ಸಂಜಿತಾ (ಕೆಯುಎಸ್ ಕಾನೂನು ಕಾಲೇಜು, ಧಾರವಾಡ) -2. ಸುಜಾತ ನಿರ್ಲೇಕರ್ (ಸ್ನಾತಕೋತ್ತರ ಕೇಂದ್ರ, ಕಾರವಾರ) -3. ಸಮಯ-1 ನಿಮಿಷ 31.92 ಸೆಕೆಂಡ್.

200 ಮೀ. ಫ್ರೀಸ್ಟೈಲ್: ಸ್ಪೂರ್ತಿ ಪಾಟೀಲ-1, ಸುಜಾತ ನಿರ್ಲೇಕರ್-2, ಪೂಜಾ ಕಟ್ಟೀಮನಿ (ಶಿವಾಜಿ ಕಾಲೇಜು, ಧಾರವಾಡ)-3. ಸಮಯ; 3ನಿ, 24.52 ಸೆ.

400 ಮೀ ಫ್ರೀಸ್ಟ್ರೈಲ್: ಸ್ಪೂರ್ತಿ ಪಾಟೀಲ.ಸಮಯ; 7 ನಿ.10.14 ಸೆ.

50 ಮೀ. ಬ್ಯಾಕ್ ಸ್ಟ್ರೋಕ್: ಸ್ಪೂರ್ತಿ ಪಾಟೀಲ-1, ಯು.ಪಿ. ಸಂಜಿತಾ-2, ಪೂಜಾ ಕಟ್ಟೀಮನಿ-3. ಸಮಯ: 51.75 ಸೆಕೆಂಡ್.

100 ಮೀ. ಬ್ಯಾಕ್ ಸ್ಟ್ರೋಕ್: ಸ್ಪೂರ್ತಿ ಪಾಟೀಲ-1, ಸಂಜಿತಾ-2, ಪೂಜಾ ಕಟ್ಟೀಮನಿ (ಶಿವಾಜಿ ಕಾಲೇಜು, ಧಾರವಾಡ)-3. ಸಮಯ; 4 ನಿ, 10.35 ಸೆ.

200 ಮೀ. ಬ್ಯಾಕ್ ಸ್ಟ್ರೋಕ್: ಸ್ಪೂರ್ತಿ-1, ಸಂಜಿತಾ-2, ಸುಜಾತ- 3. ಸಮಯ: 3 ನಿ. 48.38 ಸೆ.

200 ಮೀ. ಬ್ರೆಸ್ಟ್ ಸ್ಟ್ರೋಕ್: ಸ್ಪೂರ್ತಿ ಪಾಟೀಲ-1, ಸುಜಾತ ನಿರ್ಲೇಕರ್-2, ಯು.ಪಿ. ಸಂಜಿತಾ- 3. ಸಮಯ: 4 ನಿ. 10.35 ಸೆ.

200 ಮೀ. ವೈಯಕ್ತಿಕ ಮೆಡ್ಲೆ: ಸ್ಪೂರ್ತಿ-1, ಸಂಜಿತಾ-2, ಪೂಜಾ- 3. ಸಮಯ: 3ನಿ, 56 ಸೆ.

ಪುರುಷರು: 200 ಮೀ. ಫ್ರೀಸ್ಟೈಲ್: ಸೂರಜ್ ಶ್ರೇಷ್ಠಿ (ಪಿ.ಜಿ. ಜಿಮ್ಖಾನ, ಧಾರವಾಡ)-1,  ಅಂಕುಶ್ ಕನಬರ್ಕರ್ (ಪಿ.ಜಿ. ಜಿಮ್ಖಾನ, ಧಾರವಾಡ)-2, ಸಂಜೀವ ಕುಂಬಾರ (ಜೆಎಸ್‌ಎಸ್, ಧಾರವಾಡ) -3. ಸಮಯ: 3 ನಿ. 01.91 ಸೆ.

400 ಫ್ರೀಸ್ಟೈಲ್:  ಸೂರಜ್ ಶ್ರೇಷ್ಠಿ-1, ಅಂಕುಶ್-2, ಸಂಜೀವ ಕುಂಬಾರ-3. ಸಮಯ;3ನಿ,42.12 ಸೆ.

50 ಮೀ. ಬ್ಯಾಕ್ ಸ್ಟ್ರೋಕ್: ಅಂಕುಶ್-1, ಸಂಜೀವ-2, ಸೂರಜ್-3. ಸಮಯ; 41.44 ಸೆ.

100 ಮೀ. ಬ್ಯಾಕ್ ಸ್ಟ್ರೋಕ್: ಅಂಕುಶ್- 1, ಸಂಜೀವ ಕುಂಬಾರ- 2, ಸೂರಜ್ ಶ್ರೇಷ್ಠಿ-3. ಸಮಯ: 1ನಿ. 33.85 ಸೆ.

200 ಮೀ ಬ್ಯಾಕ್ ಸ್ಟ್ರೋಕ್: ಸಂಜೀವ- 1, ಅಂಕುಶ್-2, ಆರ್.ಎಸ್.  ಸೂರ್ಯ (ಪಿ.ಜಿ. ಜಾಬಿನ್ ಕಾಲೇಜು, ಹುಬ್ಬಳ್ಳಿ)-3. ಸಮಯ; 3 ನಿ. 42.12 ಸೆ.

200 ಮೀ. ಬ್ರೆಸ್ಟ್ ಸ್ಟ್ರೋಕ್:

ಸೂರಜ್ ಶ್ರೇಷ್ಠಿ-1, ಸಂಜೀವ್-2, ಸಿ.ಎಂ. ವಿನೋದ್ (ಪಿ.ಜಿ. ಜಿಮ್ಖಾನ, ಧಾರವಾಡ)-3. ಸಮಯ: 3 ನಿ. 35 ಸೆ.

200 ಮೀ. ವೈಯಕ್ತಿಕ ಮೆಡ್ಲೆ:

ಸೂರಜ್-1, ಸಂಜೀವ-2, ಸಿ.ಎಂ. ವಿನೋದ್-3. ಸಮಯ; 6 ನಿ. 32.62 ಸೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry