ಈಡನ್‌ನಲ್ಲಿ ಭಜ್ಜಿ ಕನಸು ನನಸಾಗುವುದೇ?

7
100ನೇ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿ ಆಫ್ ಸ್ಪಿನ್ನರ್

ಈಡನ್‌ನಲ್ಲಿ ಭಜ್ಜಿ ಕನಸು ನನಸಾಗುವುದೇ?

Published:
Updated:
ಈಡನ್‌ನಲ್ಲಿ ಭಜ್ಜಿ ಕನಸು ನನಸಾಗುವುದೇ?

ಕೋಲ್ಕತ್ತ: ವಿಶ್ವದ ಶ್ರೇಷ್ಠ ಆಫ್ ಸ್ಪಿನ್ನರ್‌ಗಳಲ್ಲಿ ಒಬ್ಬರು ಎನಿಸಿರುವ ಹರಭಜನ್ ಸಿಂಗ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ನೂರನೇ ಪಂದ್ಯದ ಹೊಸ್ತಿಲಲ್ಲಿದ್ದಾರೆ. ಈಡನ್ ಗಾರ್ಡನ್ಸ್ ಅಂಗಳದಲ್ಲಿ ಬುಧವಾರ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್‌ನಲ್ಲಿ ಆಡಿದರೆ ಭಜ್ಜಿಗೆ ಪಾಲಿಗೆ ಅದು ನೂರನೇ ಪಂದ್ಯವಾಗಲಿದೆ.

ಆದರೆ ತಮ್ಮ ಫೇವರಿಟ್ ಅಂಗಳದಲ್ಲಿ ಭಜ್ಜಿ ಅವರ ಆ ಕನಸು ನನಸಾಗುವುದು ಕಷ್ಟವಿದೆ. ಏಕೆಂದರೆ ಈ ಪಿಚ್‌ನಲ್ಲಿ ನಾಯಕ ದೋನಿ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಈ ಸುಳಿವನ್ನು ಮಂಗಳವಾರ ಅವರು ನೀಡಿದ್ದಾರೆ.ಸದ್ಯ ಫಾರ್ಮ್‌ನಲ್ಲಿಲ್ಲದ ಭಜ್ಜಿ ನೂರನೇ ಪಂದ್ಯ ಆಡಲು ಮತ್ತಷ್ಟು ದಿನ ಕಾಯಬೇಕಾಗುತ್ತದೆ. ಅಕಸ್ಮಾತ್ ಅವಕಾಶ ಸಿಕ್ಕಿದರೆ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಏಕೆಂದರೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (133 ಪಂದ್ಯ) ಹೊರತುಪಡಿಸಿದರೆ ಮತ್ತೊಬ್ಬ ಆಫ್ ಸ್ಪಿನ್ನರ್ 100 ಪಂದ್ಯ ಆಡಿದ ಸಾಧನೆ ಮಾಡಿಲ್ಲ.ವಾರದ ಹಿಂದೆಯಷ್ಟೇ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ 100 ಟೆಸ್ಟ್ ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದರು. ಇಂಥ ಸಂಭ್ರಮಕ್ಕೆ ಕಾರಣರಾಗಲು ಜಲಂಧರ್‌ನ ಈ ಸ್ಪಿನ್ನರ್ ಕಾಯುತ್ತಿದ್ದಾರೆ.ಭಾರತದ ಪರ ಟೆಸ್ಟ್‌ನಲ್ಲಿ ಒಂಬತ್ತು ಆಟಗಾರರು ಮಾತ್ರ 100 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಸಚಿನ್ (192), ದ್ರಾವಿಡ್ (164), ವಿ.ವಿ.ಎಸ್.ಲಕ್ಷ್ಮಣ್ (134), ಕುಂಬ್ಳೆ (132), ಕಪಿಲ್ ದೇವ್ (131), ಸುನಿಲ್ ಗಾವಸ್ಕರ್ (125), ದಿಲೀಪ್ ವೆಂಗ್‌ಸರ್ಕರ್ (116), ಸೌರವ್ ಗಂಗೂಲಿ (113) ಹಾಗೂ ಸೆಹ್ವಾಗ್ (100) ಮಾತ್ರ ಈ ಸಾಧನೆ ಮಾಡಿದ್ದಾರೆ. ಈಗ ಆ ಪಟ್ಟಿಗೆ ಸೇರಲು ಭಜ್ಜಿ (99 ಪಂದ್ಯ) ಕೂಡ ಕಾತರರಾಗಿದ್ದಾರೆ.ಹರಭಜನ್ ಅವರಿಗೆ ಈಡನ್ ಗಾರ್ಡನ್ಸ್ ಅಂಗಳ ಹಲವು ಸ್ಮರಣೀಯ ನೆನಪುಗಳಿಗೆ ಕಾರಣವಾಗಿದೆ. ಇದೇ ಅಂಗಳದಲ್ಲಿ 2001ರಲ್ಲಿ ಅವರು ಆಸ್ಟ್ರೇಲಿಯಾ ಎದುರು ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಇಲ್ಲಿ ಆಡಿದ 7 ಪಂದ್ಯಗಳಿಂದ 46 ವಿಕೆಟ್ ಕಬಳಿಸಿದ್ದಾರೆ.ಇಲ್ಲಿಯೇ 100ನೇ ಪಂದ್ಯ ಆಡಿದರೆ ಅದಕ್ಕಿಂತ ಶ್ರೇಷ್ಠ ಕ್ಷಣ ಇರಲಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry