ಈಡನ್‌ನಲ್ಲಿ ಭಾರತದ ಪಂದ್ಯ ಏಕಿಲ್ಲ?

7

ಈಡನ್‌ನಲ್ಲಿ ಭಾರತದ ಪಂದ್ಯ ಏಕಿಲ್ಲ?

Published:
Updated:
ಈಡನ್‌ನಲ್ಲಿ ಭಾರತದ ಪಂದ್ಯ ಏಕಿಲ್ಲ?

ಢಾಕಾ (ಐಎಎನ್‌ಎಸ್): ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯ ಭಾರತದ ಪಂದ್ಯಗಳು ನಡೆಯದಿರುವುದು ಕೋಲ್ಕತ್ತದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ. ಅವ ರೊಂದಿಗೆ ಬಾಂಗ್ಲಾದೇಶದ ಕ್ರಿಕೆಟ್ ಪ್ರಿಯರಿಗೂ ಇದು ನಿರಾಸೆ ತಂದಿದೆ.ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಯಾವುದೇ ಪಂದ್ಯವೂ ಈಡನ್‌ನಲ್ಲಿ ನಡೆಯುತ್ತಿಲ್ಲ. ಈಬಗ್ಗೆ ಢಾಕಾದ ಹಜರತ್ ಶಾ ಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು ಈ ರೀತಿ ವಿಷಾದ ವ್ಯಕ್ತಪಡಿಸುತ್ತಾರೆ.“ಈಡನ್ ಗಾರ್ಡನ್ಸ್ ಸುಂದರವಾದ ಕ್ರೀಡಾಂಗಣ. ಆದರೆ ಏಕೆ ಇಲ್ಲಿ ಭಾರತ ಆಡುವ ಪಂದ್ಯಗಳನ್ನು ಆಡಿಸುತ್ತಿಲ್ಲ. ಸ್ಥಳೀಯ ಆಡಳಿತ ಸರಿಯಾಗಿ ಸಿದ್ಧತೆ ಮಾಡದ ಕಾರಣ ಭಾರತ-ಇಂಗ್ಲೆಂಡ್ ಪಂದ್ಯ ಸ್ಥಳಾಂತರಿಸಲಾಗಿತ್ತು.ಅದರ ಬದಲಿಗೆ ಭಾರತ ಆಡುವ ಮತ್ತೊಂದು ಪಂದ್ಯ ವನ್ನಾದರೂ ಇಲ್ಲಿಗೆ ಕೊಡ ಬಹುದಿತ್ತು” ಎಂದು ಹೇಳುತ್ತಾರೆ. ಕೊನೆಯ ಹಂತದಲ್ಲಿ ವೇಳಾಪಟ್ಟಿ ಬದಲಿಸುವುದು ಕಷ್ಟದ ಕೆಲಸ ಎನ್ನುವ ವಿವರಣೆಯನ್ನು ಒಪ್ಪದ ಅಧಿಕಾರಿಗಳು, “ಇರಬಹುದು. ಆದರೆ, ಈಡನ್ ಗಾರ್ಡನ್ಸ್ ಘನತೆ ಏನಾಗ ಬೇಕು. ಎಂದು ಕ್ರೀಡಾಭಿಮಾನಿಗಳು ಪ್ರಶ್ನಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry