ಭಾನುವಾರ, ಮೇ 16, 2021
29 °C

ಈಡೇರದ ವಿದ್ಯಾ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿತುಪರ್ಣೊ ಘೋಷ್ ನಿರ್ದೇಶನದ ಬಂಗಾಳಿ ಚಿತ್ರದಲ್ಲಿ ಅಭಿನಯಿಸಬೇಕೆಂಬುದು ತಮ್ಮ ಮಹತ್ವಾಕಾಂಕ್ಷೆಯಾಗಿತ್ತು ಎಂದು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ.ಕಳೆದ ತಿಂಗಳು ರಿತುಪರ್ಣೊ ಹೃದಯಾಘಾತದಿಂದ ತೀರಿಹೋದರು. ಅವರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದ ವಿದ್ಯಾ, ಬಂಗಾಳಿ ಚಿತ್ರವೊಂದರಲ್ಲಿ ನಟಿಸಲು ಉತ್ಸುಕರಾಗಿದ್ದರು. ಹೋಟೆಲ್‌ನಿಂದ ಏರ್‌ಪೋರ್ಟ್‌ಗೆ ಕಾರ್‌ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ರಿತುಪರ್ಣೊ ಜೊತೆ ಫೋನ್ ಮೂಲಕ ನಡೆಸಿದ ಮಾತುಕತೆಯನ್ನು ಅವರು ಮೆಲುಕು ಹಾಕಿದರು.`ನನಗೆ ರಿತುಪರ್ಣೊ ಚಿತ್ರಗಳು ಇಷ್ಟ. ಅವು ಮಾಮೂಲಿ ಚಿತ್ರಗಳ ಪಥವನ್ನು ಮೀರಿದಂಥವು. ಪದೇಪದೇ ಅವರ ಜೊತೆ ನಾನು ಮಾತನಾಡುತ್ತಿದ್ದೆ. ನಾನು ಅಭಿನಯಿಸುವ ಗಳಿಗೆ ಕೂಡಿಬರುವಷ್ಟರಲ್ಲಿ ಅವರು ನಮ್ಮನ್ನೆಲ್ಲಾ ಬಿಟ್ಟುಹೋದರು' ಎಂದು ವಿದ್ಯಾ ಬೇಸರದಿಂದ ಹೇಳಿದರು.`ದಿ ಡರ್ಟಿ ಪಿಕ್ಚರ್', `ಕಹಾನಿ', `ಪರಿಣೀತಾ' ಹಿಂದಿ ಚಿತ್ರಗಳಿಂದ ಜನಪ್ರಿಯರಾಗಿರುವ ವಿದ್ಯಾ ತಮ್ಮ ಅಭಿನಯ ವೃತ್ತಿಯನ್ನು ಪ್ರಾರಂಭಿಸಿದ್ದು ಬಂಗಾಳಿ ಚಿತ್ರದ ಮೂಲಕವೇ. `ಭಾಲೋ ಠೇಕೋ' ಅವರು ಅಭಿನಯಿಸಿದ ಬಂಗಾಳಿ ಚಿತ್ರ. ಮತ್ತೊಮ್ಮೆ ಬಂಗಾಳಿ ಚಿತ್ರದಲ್ಲಿ ನಟಿಸಲು ಒಲವು ತೋರುತ್ತಿರುವ ಅವರು ತಾವು ನಟಿಸಿರುವ `ಘನ್‌ಚಕ್ಕರ್' ಹಿಂದಿ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.