ಈತನ ತೂಕ 368 ಕೆಜಿ!

7

ಈತನ ತೂಕ 368 ಕೆಜಿ!

Published:
Updated:

ಲಂಡನ್ (ಪಿಟಿಐ/ಐಎಎನ್‌ಎಸ್): ವಿಶ್ವದ ಅತಿ ತೂಕ ಹೊಂದಿರುವ ಖ್ಯಾತಿ ಬ್ರಿಟನ್‌ನ ಕೇಥ್ ಮಾರ್ಟಿನ್ ಅವರದು. ಈಗ 42 ವರ್ಷದ ಅವರ ತೂಕ ಬರೋಬ್ಬರಿ 368 ಕೆಜಿ. ಯಾವಾಗಲೂ ಹಾಸಿಗೆ ಮೇಲೇ ಇರುವ ಕೇಥ್‌ಗೆ ಉಪಾಹಾರ  ಸೇರಿದಂತೆ ಇತರ ಕೆಲಸಗಳ ಸಹಾಯಕ್ಕಾಗಿ 18 ಜನರ ಅವಶ್ಯಕತೆ ಇದೆ.ದಡೂತಿ ದೇಹದ ಕೇಥ್ ಅವರ ಸಹಾಯಕ್ಕಾಗಿ ಅಂಬ್ಯುಲೆನ್ಸ್ ಸಿಬ್ಬಂದಿ, ನರ್ಸ್‌ಗಳ ಸಹಾಯ ಬೇಕಿದ್ದು, ದೈತ್ಯ ಗಾತ್ರದ ಅವರ ಕೈಗಳನ್ನು ಮೇಲಕ್ಕೆತ್ತಲು 8 ಜನ ಅಂಬುಲೆನ್ಸ್ ಸಿಬ್ಬಂದಿ ಸಹಾಯ ಮಾಡುತ್ತಿದ್ದಾರೆ.ಕಳೆದ ಹತ್ತು ವರ್ಷಗಳಿಂದ ಹಾಸಿಗೆ ಮೇಲೆ ಇರುವ ಅವರನ್ನು ಅವಶ್ಯವಿದ್ದಾಗ ಮಾತ್ರ ಆರೋಗ್ಯ ತಪಾಸಣೆಗೆ ಒಯ್ಯಲಾಗುತ್ತಿದೆ ಎಂದು `ಡೈಲಿ ಮೇಲ್~ ವರದಿ ಮಾಡಿದೆ. ಇದರ ಜೊತೆಗೆ ದಿಗ್ಭ್ರಮೆಗೊಳಿಸುತ್ತಿರುವ ಅವರ ತೂಕ, ಹೃದಯದ ಮೇಲಿನ ಒತ್ತಡ ಮತ್ತು ದೇಹದ ಇತರ ಆಂತರಿಕ ಅಂಗಾಂಗಳ ನೋಡಿಕೊಳ್ಳಲು ಮತ್ತು ವಾರದಲ್ಲಿ ಮೂರು ಬಾರಿ ಅವರಿಗೆ ಮೈ ತೊಳೆಯಲು ನಾಲ್ವರು ನರ್ಸ್‌ಗಳ ಅವಶ್ಯಕತೆ ಇದೆ.  ಕೇಥ್ ಪ್ರತಿ ದಿನ ಉಪಾಹಾರಕ್ಕಾಗಿ ಮಾಂಸ, ಮಧ್ಯಾಹ್ನ ಚಾಕೊಲೇಟ್, ರಾತ್ರಿ ಸಾಸೇಜ್ ಮತ್ತು ಚಿಪ್ಸ್‌ಗಳನ್ನು ಸೇವಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry