ಶುಕ್ರವಾರ, ಡಿಸೆಂಬರ್ 6, 2019
17 °C

ಈದ್‌ಗೂ ಸಲ್ಮಾನ್‌ಗೂ ನಂಟು

Published:
Updated:
ಈದ್‌ಗೂ ಸಲ್ಮಾನ್‌ಗೂ ನಂಟು

ಕಳೆದ ಒಂದೆರಡು ವರ್ಷಗಳಿಂದ ಸಲ್ಮಾನ್‌ಖಾನ್ ಈದ್ ಮುಹೂರ್ತವನ್ನೇ ನಂಬಿದ್ದಾರೆ. ಈದ್ ಉಲ್ ಜುಹಾ ಅಥವಾ ಬಕ್ರೀದ್‌ನಂದು ಬಿಡುಗಡೆಯಾಗಿದ್ದ ವಾಂಟೆಡ್ (2009), ದಬಾಂಗ್ (2010), ಬಾಡಿಗಾರ್ಡ್ (2012) ಎಲ್ಲವೂ ಹಿಟ್ ಆಗಿದ್ದವು. ಈ ವರ್ಷ ಆದಿತ್ಯ ಚೋಪ್ರ ಅವರ `ಏಕ್ ಥಾ ಟೈಗರ್~ ಚಿತ್ರವನ್ನೂ ಸಲ್ಮಾನ್ ಖಾನ್ ಬಕ್ರೀದ್‌ಗೆ ಬಿಡುಗಡೆಗೊಳಿಸುವ ಯೋಚನೆಯಲ್ಲಿದ್ದಾರೆ. ಸಲ್ಮಾನ್ ಹಾಗೂ ಕತ್ರಿನಾ ಒಟ್ಟಿಗೆ ನಟಿಸುತ್ತಿರುವ ಈ ಚಿತ್ರ ಬಹುನಿರೀಕ್ಷಿತ ಚಿತ್ರವಾಗಿದೆ. ಆದರೆ ಇದೇ ಸಮಯಕ್ಕೆ ಸೋನಾಕ್ಷಿ ಸಿನ್ಹಾ ಸಹ ಈದ್ ಮುಹೂರ್ತವನ್ನೇ ಕಾಯುತ್ತಿದ್ದಾರೆ. ಸೋನಾಕ್ಷಿ ಹಾಗೂ ರಣವೀರ್ ನಟಿಸುತ್ತಿರುವ `ಲುಟೇರಾ~ ಚಿತ್ರವನ್ನೂ ಈ ವರ್ಷದ ಅಕ್ಟೋಬರ್ 26ರಂದು ಬಿಡುಗಡೆಗೊಳಿಸಲು ಯೋಚಿಸಿದ್ದಾರೆ. ಮೀನುಕಂಗಳ ಈ ಚೆಲುವೆ ದಬಾಂಗ್‌ನಿಂದ ಖ್ಯಾತಿ ಗಳಿಸಿರುವುದರಿಂದ ಇವರೂ ಇದೇ ದಿನವನ್ನು ನೆಚ್ಚಿದ್ದಾರೆ. ಬಕ್ರೀದ್‌ನಂದು ಪ್ರೇಕ್ಷಕರು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಈದ್ ನಂತರವೇ ತಿಳಿಯಲಿದೆ. 

 

ಪ್ರತಿಕ್ರಿಯಿಸಿ (+)