ಈದ್ ಮಿಲಾದ್ ಸಡಗರದಲ್ಲಿ ಸುರಕುಂಬಾ ಸವಿ

7

ಈದ್ ಮಿಲಾದ್ ಸಡಗರದಲ್ಲಿ ಸುರಕುಂಬಾ ಸವಿ

Published:
Updated:
ಈದ್ ಮಿಲಾದ್ ಸಡಗರದಲ್ಲಿ ಸುರಕುಂಬಾ ಸವಿ

ಸಿಂದಗಿ: ಈದ್ ಮಿಲಾದ್ ಅಂಗವಾಗಿ ಶುಕ್ರವಾರ ಸಿಂದಗಿಯಲ್ಲಿ ಮುಸ್ಲಿಂ ಬಾಂಧವರು ಹಜರತ್ ಗಾಜಿಹುಸೇನಿ ದರ್ಗಾ ಯಂಗ್ ಕಮಿಟಿ ನೇತೃತ್ವದಲ್ಲಿ ಸಡಗರದಿಂದ ಮೆರವಣಿಗೆ ನಡೆಸಿದರು.ಸ್ಥಳೀಯ ಮೋರಟಗಿ ನಾಕಾದಲ್ಲಿ ಹಿಂದೂ-ಮುಸ್ಲಿಮರು ಒಂದಾಗಿ ಸುರಕುಂಬಾ ಸವಿದು ಸೌಹಾರ್ದತೆ ಮೆರೆದರು.ಈ ಸಂದರ್ಭದಲ್ಲಿ ತನ್ವೀರ್ ಭೈರಾಮಡಗಿ, ಫಾರೂಕ್ ಮುಲ್ಲಾ ಮಾತನಾಡಿ, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಇಸ್ಲಾಂ ಧರ್ಮದ ಕೊನೆಯ ಪ್ರವಾದಿ. ಇವರು ಹಿಂದೂಸ್ತಾನದಿಂದ ಸಾವಿರ ಸಲ ಕಾಲ್ನಡಿಗೆಯಿಂದ ಹಜ್ ಯಾತ್ರೆ ನೆರವೇರಿಸಿದ್ದಾರೆ. ಇವರು ಇಡೀ ಜಗತ್ತಿಗೆ ಶಾಂತಿ ಮತ್ತು ಸಹೋದರತ್ವದ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.ಮುಸ್ಲಿಂ ಸಮುದಾಯದ ಪ್ರಮುಖರಾದ ಮುನ್ನಾ ಭೈರಾಮಡಗಿ, ಭಾಷಾಸಾಬ ತಾಂಬಾಲಿ, ಇಬ್ರಾಹಿಂ ನಾಟೀಕಾರ, ಮೈಬೂಬ ಸಿಂದಗಿಕರ್ ಹಾಗೂ ಯಂಗ್ ಕಮಿಟಿ ಸದಸ್ಯರಾದ ರಫೀಕ್ ಮನಿಯಾರ, ವಾಹೀದ್ ನಾಟೀಕಾರ, ಬಂದೂ ಆಲಮೇಲ, ಮೈಬೂಬ್ ಮುಲ್ಲಾ, ಸೈಫನ್ ಬಮ್ಮನಜೋಗಿ, ರಾಜೂ ಖೇಡ, ಆಸೀಫ್ ಆಲಮೇಲ, ಇರ್ಫಾನ್ ಸಿಂದಗಿಕರ್, ಲಿಯಾಕತ್ ಗುಂದಗಿ, ಜಕರಿಯಾ ಬಾಗವಾನ  ಮುಂತಾ ದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.ನಂತರ ಸಮಸ್ತ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು ಪಟ್ಟಣದ ಟಿಪ್ಪು ಸುಲ್ತಾನ್ ಚೌಕ್ ಸೇರಿದಂತೆ ಸಂಗಮ ಬಾರ್ ಬಳಿ ಸಾರ್ವಜನಿಕರಿಗೆ ಸುರಕುಂಬಾ ಸಿಹಿ ವಿತರಿಸಲಾಯಿತು.

ಟಿಪ್ಪುಸುಲ್ತಾನ ವೃತ್ತ: ಸ್ಥಳೀಯ ಟಿಪ್ಪುಸುಲ್ತಾನ ವೃತ್ತದಲ್ಲಿ ಟಿಪ್ಪುಸುಲ್ತಾನ್ ಯಂಗ್ ಕಮಿಟಿ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್  ಜಯಂತಿಯನ್ನು ಸಾರ್ವಜನಿಕರಿಗೆ ಸಿಹಿ ಸುರಕುಂಬಾ ವಿತರಿಸುವ ಮೂಲಕ ಆಚರಿಸಿದರು.ಕಮಿಟಿ ಅಧ್ಯಕ್ಷ ಅಬ್ದುಲ್ ರಜಾಕ್ ಮುಜಾವರ, ಇಕ್ಬಾಲ್ ತಲಕಾರಿ, ಹಾಸೀಮ ಆಳಂದ, ಬಸೀರ ಮರ್ತೂರ, ಸದ್ದಾಮ ಆಳಂದ, ಮೈಬೂಬ್ ಆಳಂದ, ಮೌಸೀನ್ ನಾಟೀಕಾರ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry