ಮಂಗಳವಾರ, ಏಪ್ರಿಲ್ 13, 2021
32 °C

ಈರುಳ್ಳಿ: ಕನಿಷ್ಠ ರಫ್ತು ಬೆಲೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವದೆಹಲಿ (ಪಿಟಿಐ): ಈರುಳ್ಳಿ ರಫ್ತು ಮೇಲಿನ ಕನಿಷ್ಠ ರಫ್ತು ಬೆಲೆಗಳನ್ನು (ಎಂಇಪಿ) ಕೇಂದ್ರ ಸರ್ಕಾರವು  ಪ್ರತಿ ಟನ್‌ಗೆ 600 ಡಾಲರ್‌ಗಳಿಂದ (್ಙ27,600) 450 ಡಾಲರ್‌ಗಳಿಗೆ (ರೂ 20,700) ಇಳಿಸಿದೆ.ಬೆಂಗಳೂರು ಸುತ್ತಮುತ್ತ ಮತ್ತು  ಕೃಷ್ಣಪುರಂ ಪ್ರದೇಶಗಳಲ್ಲಿ ಬೆಳೆಯುವ ರೋಸ್ (ಕೆಂಪು ಈರುಳ್ಳಿ) ತಳಿಗೆ ಪ್ರತಿ ಟನ್‌ಗೆ ್ಙ 20,700ರಷ್ಟು ‘ಎಂಇಪಿ’ ನಿಗದಿಪಡಿಸಲಾಗಿದೆ ಎಂದು ವಿದೇಶ ವ್ಯಾಪಾರ  ಮಹಾ ನಿರ್ದೇಶನಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಗಮನಾರ್ಹವಾಗಿ ಕುಸಿದು ರೈತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರಿಂದ ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ಮೇಲಿನ ನಿಷೇಧ ರದ್ದುಗೊಳಿಸಿತ್ತು. ಆದರೆ, ಬೆಲೆಗಳ ಮೇಲೆ ನಿಯಂತ್ರಣ ಹೊಂದುವ ಮುಂಜಾಗ್ರತಾ ಕ್ರಮವಾಗಿ, ರಫ್ತು ಮೇಲಿನ ಕನಿಷ್ಠ ರಫ್ತು ಬೆಲೆಯನ್ನು ಗರಿಷ್ಠ ಪ್ರಮಾಣದಲ್ಲಿ ನಿಗದಿಪಡಿಸಿತ್ತು. ಡಿಸೆಂಬರ್ ತಿಂಗಳಲ್ಲಿ ದೇಶದಾದ್ಯಂತ ಈರುಳ್ಳಿ ಬೆಲೆ ಪ್ರತಿ ಕೆಜಿಗೆ ್ಙ 70ರಿಂದ ್ಙ 80ರವರೆಗೆ ಏರಿಕೆ ಕಂಡಿತ್ತು.ಪ್ರತಿ ಟನ್‌ಗೆ 600 ಡಾಲರ್‌ಗಳಷ್ಟು ಕನಿಷ್ಠ ರಫ್ತು ಬೆಲೆ ನಿಗದಿಪಡಿಸಿರುವುದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಕ್ಕೆ ಹೋಲಿಸಿದರೆ ತುಂಬ  ದುಬಾರಿ ಎನಿಸುತ್ತದೆ.   ಇದರಿಂದ ರಫ್ತುದಾರರು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದರು.ಈ ಹಿನ್ನೆಲೆಯಲ್ಲಿ, ಈಗ ಹೊರಡಿಸಿರುವ ಅಧಿಸೂಚನೆಯು ರಫ್ತುದಾರರ ಪಾಲಿಗೆ ಸಾಕಷ್ಟು ಸಮಾಧಾನ ತರುವ ನಿರೀಕ್ಷೆ ಇದೆ. 2010-11ನೇ ಸಾಲಿನಲ್ಲಿ ದೇಶದಲ್ಲಿ ಈರುಳ್ಳಿ ಉತ್ಪಾದನೆಯು  10.5 ದಶಲಕ್ಷ ಟನ್‌ಗಳಷ್ಟು ಇರಲಿದ್ದು, ಇದು ಈ ಹಿಂದಿನ ವರ್ಷದ 12 ದಶಲಕ್ಷ ಟನ್‌ಗಳಿಗಿಂತ ಕಡಿಮೆ ಇರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.