ಈರುಳ್ಳಿ ಬೆಲೆ ಏರಿಕೆ ಪರಿಶೀಲನೆಗೆ ಸೂಚನೆ

7

ಈರುಳ್ಳಿ ಬೆಲೆ ಏರಿಕೆ ಪರಿಶೀಲನೆಗೆ ಸೂಚನೆ

Published:
Updated:

ನವದೆಹಲಿ(ಪಿಟಿಐ): ದೇಶದಾದ್ಯಂತ ಈರುಳ್ಳಿ ಬೆಲೆ ಗಗನಮುಖಿಯಾಗಿ ಸಾಗುತ್ತಿರು­ವುದರಿಂದ ಮಾರುಕಟ್ಟೆ ಶಕ್ತಿಗಳು ಇದರಲ್ಲಿ ತೊಡಗಿವೆಯೇ ಎಂದು ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ  ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ಎಲ್ಲ ರಾಜ್ಯಗಳಿಗೆ ತಿಳಿಸಿದೆ.ಸದ್ಯ ಈರುಳ್ಳಿ ಬೆಲೆ ರೂ. 65 ರಿಂ 80 ಇದ್ದು, ಕಳೆದ ಹಲವಾರು ತಿಂಗಳಿನಿಂದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಈರುಳ್ಳಿ ಮಾರುಕಟ್ಟೆಯ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆಯೋಗ ಪತ್ರ ಬರೆಯಲಿದೆ ಎಂದು ಮೂಲಗಳು ತಿಳಿಸಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಆಂಧ್ರಪ್ರದೇಶ ಈರುಳ್ಳಿ ಬೆಳೆ ಯುವ ಪ್ರಮುಖ ರಾಜ್ಯಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry