ಈರುಳ್ಳಿ ಬೆಲೆ ಹೆಚ್ಚಳ: ರೈತರಿಗೆ ಸಂತಸ

7

ಈರುಳ್ಳಿ ಬೆಲೆ ಹೆಚ್ಚಳ: ರೈತರಿಗೆ ಸಂತಸ

Published:
Updated:

ಜಾವಗಲ್: ಇಲ್ಲಿನ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದು, ಅತ್ಯಧಿಕ ಬೆಲೆ ಸಿಕ್ಕಿರುವುದರಿಂದ ಸಂತಸ ವ್ಯಕ್ತಪಡಿಸಿದ್ದಾರೆ.ಕ್ವಿಂಟಲ್‌ಗೆ  ರೂ 4500 ರಿಂದ 5000ವರೆಗೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಕಳೆದ ವರ್ಷ ಈರುಳ್ಳಿಗೆ ಉತ್ತಮ ಬೆಲೆ ಸಿಗದಿದ್ದರಿಂದ ರೈತರು ಕಂಗಾಲಾಗಿದ್ದರು.  ಈ ಭಾಗದ ರೈತರು ಕಳೆದ 6 ವರ್ಷದಿಂದ ತೀವ್ರ ಬರಗಾಲ ಎದುರಿಸುತ್ತಿದ್ದಾರೆ.ಮಳೆ ಕೊರತೆಯ ನಡುವೆಯೂ ಕೊಳವೆ ಬಾವಿ ನೀರಿನಲ್ಲಿ ಕೆಲವು ರೈತರು ನೂರಾರು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾರೆ. ಈ ಬಾರಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ ಎಂದು ರೈತ ಶ್ರೀನಿವಾಸ್‌ಗೌಡ ಹರ್ಷ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry