ಈರುಳ್ಳಿ ಮಹತ್ವ

7

ಈರುಳ್ಳಿ ಮಹತ್ವ

Published:
Updated:

ಈರುಳ್ಳಿ ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿ. ಪ್ರತಿದಿನವೂ ಈರುಳ್ಳಿ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ನೀವು ಊಟ ಮಾಡಿದ ಆಹಾರ ಜೀರ್ಣವಾಗಿಲ್ಲದಿದ್ದರೆ ಈರುಳ್ಳಿಯನ್ನು ಸುಟ್ಟು ತಿನ್ನಿ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಕಣ್ಣು ನೋವನ್ನೂ ಕಡಿಮೆ ಮಾಡಿಕೊಳ್ಳಬಹುದು.ಈರುಳ್ಳಿ ಹೂವುಗಳೂ ಜೀರ್ಣಶಕ್ತಿ ಹೆಚ್ಚಿಸಲು ನೆರವಾಗುತ್ತವೆ. ಈರುಳ್ಳಿ ಸೇವನೆ ಹೃದಯದ ಕಾಯಿಲೆಗಳಿಂದ ದೂರ ಇಡಬಲ್ಲದು ಗೊತ್ತೇ? ಅಲ್ಲದೆ ಈರುಳ್ಳಿಯನ್ನು ಗಾಢವಾಗಿ ಮೂಸುವುದರಿಂದ ತಲೆನೋವು ಹಾಗೂ ನೆಗಡಿ ಸಹ ಕಡಿಮೆಯಾಗುತ್ತದೆ.ಚುಟುಕು-ಚುರುಕು

*ತರಕಾರಿಗಳೊಂದಿಗೆ ಶುಂಠಿಯನ್ನು ಸೇರಿಸಿ ಊಟ ಮಾಡುವುದರಿಂದ ಗ್ಯಾಸ್ ಟ್ರಬಲ್ ಉಂಟಾಗುವುದಿಲ್ಲ.*ಜೀರಿಗೆಯನ್ನು ನುಣ್ಣಗೆ ಅರೆದು ಹಾಲಿನಲ್ಲಿ ಸೇರಿಸಿ ತಲೆಗೆ ತಿಕ್ಕಿಕೊಂಡು ಸ್ನಾನ ಮಾಡುವುದರಿಂದ ಹೊಟ್ಟು ಕಡಿಮೆಯಾಗುತ್ತದೆ.*ಹಳೆ ಹುಣಿಸೆ ಹಣ್ಣು, ಪುದೀನ, ಮೆಣಸು, ಹುರಿದ ಏಲಕ್ಕಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಅರೆದು ಉಪ್ಪು ಹಾಕಿ ತಿಂದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.*ಮಕ್ಕಳಿಗೆ ಅನಾನಸ್ ಹಣ್ಣನ್ನು ಪ್ರತಿ ದಿನವೂ ಮಿತವಾಗಿ ಸೇವಿಸಲು ಕೊಡುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ.*ಸೇಬಿನ ತಿರುಳನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry