ಈರುಳ್ಳಿ ರಫ್ತು ನಿಷೇಧ ತೆರವು:ಕೇಂದ್ರ ನಿರ್ಧಾರ

7

ಈರುಳ್ಳಿ ರಫ್ತು ನಿಷೇಧ ತೆರವು:ಕೇಂದ್ರ ನಿರ್ಧಾರ

Published:
Updated:

ನವದೆಹಲಿ (ಪಿಟಿಐ): ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರವು ಗುರುವಾರ ತೆರವುಗೊಳಿಸಿದೆ.ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಮನಾರ್ಹವಾಗಿ ಕುಸಿದು ಬೆಳೆಗಾರರ ಪ್ರತಿಭಟನೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಅಕ್ರಮ ಸಂಗ್ರಹಕಾರರ ವಿರುದ್ಧ ಸರ್ಕಾರ ಕೈಗೊಂಡ ದೃಢ ಕ್ರಮಗಳಿಂದಾಗಿ ಮತ್ತು ಹೊಸ ಫಸಲು ಮಾರುಕಟ್ಟೆ ಬಂದ ಕಾರಣಕ್ಕೆ  45ರಿಂದ 50 ದಿನಗಳಲ್ಲಿ ಈರುಳ್ಳಿ ಗಮನಾರ್ಹ ಕುಸಿತ ಕಂಡಿದೆ.ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿನ ಸಚಿವರ ಅಧಿಕಾರ ಸಮಿತಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ.ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಸರ್ಕಾರವು ಈರುಳ್ಳಿ ರಫ್ತು ನಿಷೇಧಿಸಿತ್ತು.ಮತ್ತೆ ಬೆಲೆ ಏರಬಹುದು ಎನ್ನುವ  ಸಾಧ್ಯತೆಗಳ ಹಿನ್ನೆಲೆಯಲ್ಲಿ ಮುಂಜಾ   ಗ್ರತಾ ಕ್ರಮವಾಗಿ ಪ್ರತಿ ಟನ್‌ಗೆ ್ಙ 28 ಸಾವಿರದಂತೆ (600 ಡಾಲರ್) ಕನಿಷ್ಠ ರಫ್ತು ಬೆಲೆಗೆ (ಎಂಇಪಿ) ಈರುಳ್ಳಿ ರಫ್ತು ಮಾಡಲು ಅವಕಾಶ ಕಲ್ಪಿಸಿದೆ.ನಿಷೇಧಕ್ಕೂ ಮುನ್ನ 11.58 ಲಕ್ಷ ಟನ್‌ಗಳಷ್ಟುಈರುಳ್ಳಿಯನ್ನು ಕೊಲ್ಲಿ ದೇಶಗಳು, ಶ್ರೀಲಂಕಾ ಮತ್ತು ಮಲೇಷ್ಯಾಕ್ಕೆ ರಫ್ತು ಮಾಡಲಾಗಿತ್ತು.

ಸದ್ಯಕ್ಕೆ ಈರುಳ್ಳಿಯನ್ನು ಪ್ರಮುಖವಾಗಿ ಬೆಳೆಯುವ ಮಹಾರಾಷ್ಟ್ರದ ನಾಸಿಕ್ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ್ಙ 4ರಿಂದ ್ಙ 12ರವರೆಗೆ ಮಾರಾಟವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry