ಈರುಳ್ಳಿ ರಫ್ತು ಹೆಚ್ಚಳ

7

ಈರುಳ್ಳಿ ರಫ್ತು ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತಿ ಟನ್‌ಗೆ 150 ಡಾಲರ್‌ಗಳಿಗೆ (ರೂ. 7,500) ಇಳಿಸಿದ ನಂತರ ಈರುಳ್ಳಿ ರಫ್ತು ಪ್ರಮಾಣ ಹೆಚ್ಚಳಗೊಂಡಿದೆ.

`ಎಂಇಪಿ~ ಕಡಿಮೆಯಾಗಿದ್ದರಿಂದ ರಫ್ತು ಪ್ರಮಾಣವು ಶೇ 10ರಷ್ಟು ಹೆಚ್ಚಳವಾಗಿದೆ. ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಒಟ್ಟು 1,20,649 ಟನ್‌ಗಳಷ್ಟು (ಹೆಚ್ಚುವರಿಯಾಗಿ 362 ಟನ್) ಈರುಳ್ಳಿ ರಫ್ತಾಗಿದೆ.

ಜನವರಿ 11ರಂದು ಸರ್ಕಾರವು `ಎಂಇಪಿ~ಯನ್ನು ಪ್ರತಿ ಟನ್‌ಗೆ 250 ಡಾಲರ್‌ನಿಂದ 150 ಡಾಲರ್‌ಗಳಿಗೆ ಇಳಿಸಿತ್ತು. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಈರುಳ್ಳಿಯ ಸ್ಪರ್ಧಾತ್ಮಕತೆ ಹೆಚ್ಚಿದೆ ಎಂದು ಮುಂಬೈನ ಕೃಷಿ ರಫ್ತು ಸಂಘದ ಅಧ್ಯಕ್ಷ ಅಜಿತ್ ಶಾ ಹೇಳಿದ್ದಾರೆ.

ಹೊಸ ವರ್ಷಾಚರಣೆಯ ಬಿಡುವಿನ ನಂತರ ಚೀನಾ ಮತ್ತು ಸಿಂಗಪುರದ ಮಾರುಕಟ್ಟೆಗಳು ಕಾರ್ಯಾರಂಭ ಮಾಡುತ್ತಿದ್ದಂತೆ ರಫ್ತು ಪ್ರಮಾಣ ಇನ್ನಷ್ಟು ಹೆಚ್ಚಬಹುದು ಎಂದೂ ಅವರು ಹೇಳಿದ್ದಾರೆ.

ಆದರೆ, `ಎಂಇಪಿ~ಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎನ್ನುವುದು ಈರುಳ್ಳಿ ಬೆಳೆಗಾರರ ಬೇಡಿಕೆಯಾಗಿದೆ. ಈರುಳ್ಳಿಯನ್ನೇ ಪ್ರಮುಖವಾಗಿ ಬೆಳೆಯುವ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ರೈತರು, `ಎಂಇಪಿ~ ಕಡಿತದಿಂದ ಸಂತಸಗೊಂಡಿಲ್ಲ. ಕನಿಷ್ಠ ರಫ್ತು ಬೆಲೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎನ್ನುವುದು ಅವರ ಬೇಡಿಕೆಯಾಗಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶಿ ಈರುಳ್ಳಿಗೆ ಇನ್ನಷ್ಟು ಬೇಡಿಕೆ ಕುದುರಲು `ಎಂಇಪಿ~ ಪೂರ್ಣವಾಗಿ ರದ್ದಾಗಬೇಕು ಎಂದು ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry