ಈರುಳ್ಳಿ ಸಗಟು ಬೆಲೆ ₨5 ಇಳಿಕೆ

7

ಈರುಳ್ಳಿ ಸಗಟು ಬೆಲೆ ₨5 ಇಳಿಕೆ

Published:
Updated:

ನವದೆಹಲಿ(ಪಿಟಿಐ): ಈರುಳ್ಳಿ ಸಗಟು ಧಾರಣೆ ಮಂಗಳವಾರ ಇಲ್ಲಿ  ಕೆ.ಜಿ ₨5 ಇಳಿಕೆ ಕಂಡಿದ್ದು, ₨45ರಿಂದ ₨40ಕ್ಕೆ ತಗ್ಗಿದೆ. ಆದರೆ, ಚಿಲ್ಲರೆ ಮಾರಾಟ ದರ ಇನ್ನೂ ₨60ರಿಂದ ₨70ರಲ್ಲೇ ಇದೆ.ದೇಶದ ಬೇಡಿಕೆ ಪೂರೈಸಲು ಈಜಿಪ್ಟ್‌ ಸೇರಿದಂತೆ ವಿವಿಧ ದೇಶಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾ­ಗಿದೆ. ಕರ್ನಾ­ಟ­ಕದ ಹೊಸ ಈರುಳ್ಳಿಯೂ ಮಾರು ಕಟ್ಟೆ ಪ್ರವೇಶಿ­ಸಿದೆ. ಒಟ್ಟಾರೆ 600 ಟನ್‌ಗ ಳಷ್ಟು ಈರುಳ್ಳಿ ಒಂದು ವಾರದೊಳಗೆ ಮುಂಬೈ ಸಗಟು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದ್ದು, ಬೆಲೆ ಇಳಿಯಲಿದೆ ಎಂದು ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಸುರೇಂದ್ರ ಬುಧಿರಾಜ್‌ ಹೇಳಿದ್ದಾರೆ.‘10ರಿಂದ 15 ದಿನದೊಳಗೆ ಈರುಳ್ಳಿ ಬೆಲೆ ಖಂಡಿತ ಇಳಿಕೆ ಕಾಣಲಿದೆ’ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ಧಾರಣೆ

ಬೆಂಗಳೂರು ಸಗಟು ಮಾರುಕಟ್ಟೆಗೆ ಮಂಗಳವಾರ 71,000 ಕ್ವಿಂಟಲ್‌­ಈರುಳ್ಳಿ ಆವಕವಾಗಿದೆ ಎಂದು ರಾಷ್ಟ್ರೀಯ ತೋಟಗಾರಿಕೆ ಸಂಶೋ­ಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಮಾಹಿತಿ ನೀಡಿದೆ. ಬೆಂಗಳೂ­ರಿನಲ್ಲಿ ಈರುಳ್ಳಿ ಸಗಟು ಧಾರಣೆ ಕೆ.ಜಿಗೆ  ₨42ರಿಂದ ₨48ರಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry