ಶುಕ್ರವಾರ, ಏಪ್ರಿಲ್ 16, 2021
22 °C

ಈಶಾನ್ಯ ರಾಜ್ಯಗಳ ಜನರಿಗೆ ಕೇಂದ್ರ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ನವದೆಹಲಿ (ಪಿಟಿಐ): ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂಬುದು ಶುದ್ದ ಸುಳ್ಳು ಎಂದಿರುವ ಕೇಂದ್ರ ಗೃಹ ಸಚಿವಾಲಯ ಯಾವುದೇ ಭಾಗದ ಜನರು ದೇಶದ ಯಾವುದೇ ಭಾಗದಲ್ಲೂ ನಿರ್ಭಯವಾಗಿ ನೆಲೆಸಬಹುದು ಎಂದು ಗುರುವಾರ ಅಭಯ ನೀಡಿದ ಹೊರತಾಗಿಯೂ ಸುಮಾರು 5 ಸಾವಿರ ಮಂದಿ ಬೆಂಗಳೂರನ್ನು ತೊರೆದಿದ್ದಾರೆ.ಈಶಾನ್ಯ ರಾಜ್ಯಗಳ ಜನರ ಮೇಲೆ ಎಲ್ಲೂ ಹಲ್ಲೆ ನಡೆಯುತ್ತಿಲ್ಲ. ಇದೊಂದು ವದಂತಿ ಅಷ್ಟೆ ಎಂದಿರುವ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ  ವದಂತಿ ಹಬ್ಬಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.ಈ ಮಧ್ಯೆ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರು ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಪ್ರಧಾನಿ ಮನಮೋಹನಸಿಂಗ್ ಹಾಗೂ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಯ್ ಅವರು ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರೊಂದಿಗೆ ದೂರವಾಣಿ ಮೂಲಕ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.ಆದಾಗ್ಯೂ ಭಯಭೀತಗೊಂಡ ಈಶಾನ್ಯ ರಾಜ್ಯಗಳ ಜನತೆ ಬೆಂಗಳೂರಿನಿಂದ ತಂಡೋಪತಂಡವಾಗಿ ತಮ್ಮಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ರೈಲು ಇಲಾಖೆ ಎರಡು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಸುಮಾರು 5 ಸಾವಿರ ಮಂದಿ ಈಶಾನ್ಯರಾಜ್ಯಗಳ ಜನರು ಬೆಂಗಳೂರನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.