ಈಶ್ವರಪ್ಪಗೆ ಛೀಮಾರಿ

7

ಈಶ್ವರಪ್ಪಗೆ ಛೀಮಾರಿ

Published:
Updated:

ನವದೆಹಲಿ: ಕೋಮು ಭಾವನೆ ಕೆರಳಿಸುವ ಪ್ರಚೋದನಾಕಾರಿ ಭಾಷಣ ಮಾಡಿದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಚುನಾವಣಾ ಆಯೋಗ ಛೀಮಾರಿ ಹಾಕಿದ್ದು, ಇನ್ನು ಮುಂದೆ ಹೀಗೆ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿದೆ.ಶಿವಮೊಗ್ಗ ನಗರದಿಂದ ವಿಧಾನಸಭೆಗೆ ಸ್ಪರ್ಧಿಸಿರುವ ಈಶ್ವರಪ್ಪ ಏಪ್ರಿಲ್ 9ರಂದು `ಅಲ್ಪಸಂಖ್ಯಾತ ಸಮುದಾಯದ ಯುವಕರು 68 ಯುವತಿಯರನ್ನು ಅಪಹರಿಸಿದ್ದಾರೆ. ಉದ್ಯೋಗ ಮತ್ತಿತರ ಆಮಿಷವೊಡ್ಡಿ ಅವರನ್ನು ಎಳೆದೊಯ್ದು 6 ತಿಂಗಳು, ವರ್ಷದ ಬಳಿಕ ಬೀದಿಗೆ ಬಿಸಾಡಿದ್ದಾರೆ' ಎಂದು ಮಾಡಿರುವ ಪ್ರಚೋದನಕಾರಿ ಭಾಷಣವನ್ನು ಆಯೋಗ ಪರಿಗಣಿಸಿ ಛೀಮಾರಿ ಹಾಕಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry