ಶನಿವಾರ, ನವೆಂಬರ್ 16, 2019
21 °C

ಈಶ್ವರಪ್ಪಗೆ ಸಂಕಷ್ಟ

Published:
Updated:

ಶಿವಮೊಗ್ಗ: ಮುಸ್ಲಿಮರ ವಿರುದ್ದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ  ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾ ಅಧ್ಯಕ್ಷ ಸಯ್ಯದ್ ವಾಹಿದ್ ಅಡ್ಡು ಎರಡನೇ ಜೆಎಂಎಫ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.ಸಿಆರ್‌ಪಿಸಿ 200, ಐಪಿಸಿ 499 ಮತ್ತು 500ರ ಅಡಿಯಲ್ಲಿ (ಮಾನಹಾನಿ ಹಾಗೂ ಕ್ರಿಮಿನಲ್ ಪ್ರಕರಣ) ಈಶ್ವರಪ್ಪ ವಿರುದ್ದ ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಧೀಶ ಅರ್ಜುನ್ ಮಳ್ಳೂರ್ ಅವರಿಗೆ ವಕೀಲ ಎ.ಟಿ. ಬೆಳಿಯಪ್ಪ ಮೂಲಕ ಸಯ್ಯದ್ ವಾಹಿದ್ ಅಡ್ಡು ದೂರು ನೀಡಿದ್ದಾರೆ.

  

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ, ಮುಸ್ಲಿಮರು ಶಿವಮೊಗ್ಗ ಒಂದರಲ್ಲೇ 68 ಜನ ಎಳೆ ವಯಸ್ಸಿನ ಬ್ರಾಹ್ಮಣ ವಿದ್ಯಾರ್ಥಿನಿಯರನ್ನು `ಲವ್ ಜಿಹಾದ್' ಹೆಸರಿನಲ್ಲಿ 6ರಿಂದ 8 ತಿಂಗಳು ಬಳಸಿ, ಬಿಸಾಕಿ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಾನು ದಾಖಲೆ ನೀಡಲು ಸಿದ್ಧ ಎಂದು ಹೇಳಿದ್ದರು.

ಪ್ರತಿಕ್ರಿಯಿಸಿ (+)