`ಈಶ್ವರಪ್ಪ ಹೇಳ್ದಂಗೆ ಕೇಳೋದು ತಪ್ಪಿತು'

7

`ಈಶ್ವರಪ್ಪ ಹೇಳ್ದಂಗೆ ಕೇಳೋದು ತಪ್ಪಿತು'

Published:
Updated:

ತುಮಕೂರು: `ಪಕ್ಷದಿಂದ ಅಮಾನತು ಮಾಡಿದ್ದು ಒಳ್ಳೆಯದೇ ಆಯಿತು. ನಾನಿನ್ನು ಸ್ವತಂತ್ರ ಹಕ್ಕಿ. ಈಶ್ವರಪ್ಪ ಹೇಳ್ದಂಗೆ ಕೇಳೋದು ತಪ್ಪಿತು' ಎಂದು ಬಿಜೆಪಿಯಿಂದ ಅಮಾನತುಗೊಂಡ ಸಂಸದ ಜಿ.ಎಸ್.ಬಸವರಾಜ್ ಶನಿವಾರ ಪ್ರತಿಕ್ರಿಯಿಸಿದರು.ಅಮಾನತು ಆದೇಶ ಹೊರಬಿದ್ದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಅವರು, `ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆ ವಿರೋಧಿಸಿ ನಿನ್ನೆಯಷ್ಟೇ ಮತ ಹಾಕಿಸಿಕೊಂಡ್ರು. ಹೈಕಮಾಂಡ್ ನಾಯಕರೆಲ್ಲರೂ ಜೊತೆಯಲ್ಲೇ ಇದ್ದರು. ಆದರೆ ಈಗ ಅಮಾನತು ಮಾಡಿದ್ದಾರೆ. ಯಾತಕ್ಕಾಗಿ ಅಮಾನತು ಮಾಡಿದ್ದಾರೆ ಎಂಬುದು ಇನ್ನೂ ಗೊತ್ತಿಲ್ಲ. ನೋಟಿಸ್ ಕೂಡ ನೀಡಿಲ್ಲ' ಎಂದು ಹೇಳಿದರು.`ಇನ್ನೂ ಒಂದೂವರೆ ವರ್ಷದವರೆಗೆ ಸಂಸತ್ ಸ್ಥಾನದ ಅವಧಿ ಇದ್ದು, ಅಲ್ಲಿಯವರೆಗೂ ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಆದರೆ ಭಾನುವಾರ ನಡೆಯುವ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸುವೆ. ಆದರೆ ಆ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ' ಎಂದರು.`ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪನವರ ಉದ್ಧಟತನ ಅತಿಯಾಯಿತು. ಯಡಿಯೂರಪ್ಪ ಎಚ್ಚರಿಕೆಯ ನಡುವೆಯೂ ಅವರ ಬೆಂಬಲಿಗರ ಮೇಲೆ ಕ್ರಮ ಕೈಗೊಳ್ಳಲಾಗಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ  ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry