ಗುರುವಾರ , ಜೂನ್ 4, 2020
27 °C

ಈಸೀ ಡೇ ಮಾರ್ಕೆಟ್ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಸೀ ಡೇ ಮಾರ್ಕೆಟ್ ಹಬ್ಬ

ಬಾಣಸವಾಡಿ ರಿಂಗ್ ರಸ್ತೆಯಲ್ಲಿ ಇರುವ ಭಾರತಿ ರಿಟೇಲ್‌ನ `ಈಸೀಡೇ ಮಾರ್ಕೆಟ್ ಸ್ಟೋರ್~ ಹಬ್ಬದ ನಿಮಿತ್ತ ಗ್ರಾಹಕರಿಗಾಗಿ  `ಶುಭ ಲಾಭ  ಫೆಸ್ಟಿವ್ ಕಲೆಕ್ಷನ್~ ಪರಿಚಯಿಸಿದೆ.ಇಲ್ಲಿ ಗುಣಮಟ್ಟದ ನಿತ್ಯೋಪಯೋಗಿ ಉತ್ಪನ್ನಗಳನ್ನು ರಿಯಾಯ್ತಿ ಬೆಲೆಗೆ ಕೊಳ್ಳಬಹುದು. ಉಡುಗೆ ತೊಡುಗೆಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಮನೆ ಉಪಕರಣಗಳು ಮತ್ತು ವಸ್ತುಗಳು, ಕನ್‌ಫೆಕ್ಷನರಿ, ಡ್ರೈ ಫ್ರೂಟ್ಸ್ ಹಾಗೂ ಲಿನನ್  ಮತ್ತು ಬೆಡ್ಡಿಂಗ್ ಮೊದಲಾದ ವ್ಯಾಪಕ ಶ್ರೇಣಿಯ ಸಾಮಗ್ರಿಗಳು ಇದರಲ್ಲಿವೆ.499 ರೂಪಾಯಿಯಿಂದ ಪ್ರಾರಂಭವಾಗುವ ಸೀರೆ, ಕುರ್ತಿ, 299 ರೂ ದಿಂದ ಪ್ರಾರಂಭವಾಗುವ ಪುರುಷರ ಕುರ್ತಾಗಳು, ಮಕ್ಕಳಿಗಾಗಿ ರೂ 397 ರಿಂದ ಪ್ರಾರಂಭವಾಗುವ ವೈವಿಧ್ಯಮಯ ಉಡುಪುಗಳು ವಿಶೇಷ ಆಕರ್ಷಣೆ.ಮೈಕ್ರೋವೇವ್‌ಗಳು, ರೈಸ್ ಕುಕ್ಕರ್‌ಗಳು, ಮಿಕ್ಸರ್ ಗ್ರೈಂಡರ್‌ಗಳ ಪೈಕಿ ಅನೇಕ ಉತ್ಪನ್ನಗಳ ಬೆಲೆ 279 ರಿಂದ ಪ್ರಾರಂಭವಾಗುತ್ತವೆ. ಕನ್‌ಫೆಕ್ಷನರೀ, ಸೇವರೀಸ್ ಮತ್ತು ಚಾಕೋಲೇಟ್ ಗಿಫ್ಟ್ ಪ್ಯಾಕ್‌ಗಳು, ಬೌಲ್ ಸೆಟ್‌ಗಳು, ಗಾಜಿನ ಉಪಕರಣಗಳ ಅನೇಕ ಶ್ರೇಣಿಗಳ ಬೆಲೆ ರೂ 49 ರಿಂದ ಪ್ರಾರಂಭ.ಈ ಬಾರಿಯ ಹಬ್ಬದ ಸಂದರ್ಭದಲ್ಲಿ ಅತ್ಯಂತ ಆಕರ್ಷಕ ಬೆಲೆಗಳಲ್ಲಿ ನಮ್ಮ ಗ್ರಾಹಕರಿಗೆ ವ್ಯಾಪಕವಾದ ಉತ್ಪನ್ನ ಒದಗಿಸುವತ್ತ ನಾವು ಹೆಚ್ಚಿನ ಗಮನ ಹರಿಸಿದ್ದೇವೆ. ಅವರ ಕುಟುಂಬದವರ ಎಲ್ಲಾ ಅಗತ್ಯತೆ ಪೂರ್ತಿಗೊಳಿಸುವುದರ ಜತೆಗೆ ಖರೀದಿಯಲ್ಲಿ ಸಾಕಷ್ಟು ಉಳಿಸಲು ನೆರವಾಗುತ್ತಿದ್ದೇವೆ. ಆ ತೃಪ್ತಿ ನಮ್ಮದು ಎನ್ನುತ್ತಾರೆ ಮುಖ್ಯ ಮಾರುಕಟ್ಟೆ ಅಧಿಕಾರಿ ನಂದಿನಿ ಸೇತುರಾಮನ್. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.