ಶನಿವಾರ, ನವೆಂಬರ್ 16, 2019
21 °C

`ಈ ಅಪಾರ್ಟ್‌ಮೆಂಟ್‌ಗೆ ಪ್ರಮಾಣ ಪತ್ರ ಸಿಕ್ಕಿಲ್ಲ!'

Published:
Updated:

ಬೆಂಗಳೂರು: `ಕೊಳ್ಳುವ ಮುನ್ನ ಎಚ್ಚರ : ಈ ಅಪಾರ್ಟ್‌ಮೆಂಟ್‌ಗೆ ಸ್ವಾಧೀನ ಪ್ರಮಾಣ ಪತ್ರ ಸಿಕ್ಕಿಲ್ಲ', `ಈ ಅಪಾರ್ಟ್‌ಮೆಂಟ್‌ಗೆ ಬೆಸ್ಕಾಂನಿಂದ ಮೀಟರ್‌ಗಳನ್ನು ಅಳವಡಿಸಿಲ್ಲ, ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದಿಲ್ಲ'ಯಶವಂತಪುರ ಬಳಿಯ ಪ್ಲಾಟಿನಂಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ರೀತಿಯ ಘೋಷಣೆಯುಳ್ಳ ಸುಮಾರು 20 ಬ್ಯಾನರ್‌ಗಳು ಮಂಗಳವಾರ ಕಂಡುಬಂದವು.ಅಪಾರ್ಟ್‌ಮೆಂಟ್‌ನ ಮಾಲೀಕರು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯದ ಕಾರಣ ಫ್ಲಾಟ್‌ಗಳಿಗೆ ಸ್ವಾಧೀನ ಪ್ರಮಾಣ ಪತ್ರ ನೀಡಲಾಗಿಲ್ಲ. ಕೂಡಲೇ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದು ಬಿಡಿಎಯಿಂದ ಸ್ವಾಧೀನ ಪ್ರಮಾಣ ಪತ್ರ ಪಡೆಯಬೇಕು ಎಂದು 400 ಫ್ಲಾಟ್‌ಗಳ ಮಾಲೀಕರ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ನೋಟಿಸ್ ನೀಡಿತ್ತು.`ಸ್ವಾಧೀನ ಪ್ರಮಾಣ ಪತ್ರ ಸಿಗದೇ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಇದೇ ತೊಂದರೆ ಮುಂದೆ ಫ್ಲಾಟ್ ಕೊಳ್ಳುವವರಿಗೆ ಆಗಬಾರದೆಂಬ ಉದ್ದೇಶದಿಂದ ಈ ಬ್ಯಾನರ್‌ಗಳನ್ನು ಹಾಕಿದ್ದೇವೆ' ಎಂದು ಪ್ಲಾಟಿನಂಸಿಟಿ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಕೇಶವಪೈ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)