ಶುಕ್ರವಾರ, ಮೇ 29, 2020
27 °C

ಈ ಕ್ಷಣಕ್ಕಾಗಿ ಕಾಯುತ್ತಿದ್ದೆ: ತಾರಪೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಕ್ಷಣಕ್ಕಾಗಿ ಕಾಯುತ್ತಿದ್ದೆ: ತಾರಪೂರ್

ಬೆಂಗಳೂರು: `ಇದು ನನ್ನ ಪಾಲಿಗೆ ವಿಶೇಷ ಸುದ್ದಿ. ಈ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೆ. ಇಷ್ಟು ದಿನಗಳ ನನ್ನ ಕನಸು ನನಸಾಗಿದೆ~- `ಪ್ರಜಾವಾಣಿ~ಗೆ ಮಂಗಳವಾರ ಈ ರೀತಿ ಪ್ರತಿಕ್ರಿಯೆ ನೀಡಿದ್ದು ಕನ್ನಡದ ಅಂಪೈರ್ ಶಾವೀರ್ ತಾರಪೂರ್. ಕಾರಣ ಶಾವೀರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಆಯ್ಕೆ ಆಗಿದ್ದಾರೆ. ಈ ಸಾಧನೆ ಮಾಡುತ್ತಿರುವ ಕರ್ನಾಟಕದ 11ನೇ ಅಂಪೈರ್ ಕೂಡ.ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿ ಅಂಪೈರ್ ಎನಿಸಿರುವ ತಾರಪೂರ್ ಉಪಖಂಡದಲ್ಲಿ ನಡೆದ ವಿಶ್ವಕಪ್ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಈಗ ಟೆಸ್ಟ್‌ನಲ್ಲಿ ಅವಕಾಶ ಒಲಿದು ಬಂದಿದೆ. ದುಬೈ ಹಾಗೂ ಶಾರ್ಜಾದಲ್ಲಿ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಸರಣಿಯಲ್ಲಿ ಶಾವೀರ್ ಅಂಪೈರ್ ಆಗಿರುತ್ತಾರೆ.`ಟೆಸ್ಟ್‌ನಲ್ಲಿ ಅಂಪೈರ್ ಆಗಬೇಕು ಎಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ಆ ಆಸೆ ಈಗ ಕೈಗೂಡಿದೆ. ನಾನು ಈ ಹಿಂದೆ ಮೂರು ಟೆಸ್ಟ್ ಪಂದ್ಯಗಳಲ್ಲಿ ಟಿವಿ ಅಂಪೈರ್ ಆಗ್ದ್ದಿದ್ದೆ~ ಎಂದು ಅವರು ನುಡಿದರು.ಟೆಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಕರ್ನಾಟಕದ ಕೊನೆಯ ಅಂಪೈರ್ ಎಂದರೆ ಎ.ವಿ.ಜಯಪ್ರಕಾಶ್.

`ಇಲ್ಲೂ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸ ನನ್ನದು. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವಿದೆ. ಏಕದಿನ ಕ್ರಿಕೆಟ್‌ನ ಅನುಭವ ನೆರವಿಗೆ ಬರಲಿದೆ. ಆ ಕ್ಷಣವನ್ನು ಎದುರು ನೋಡುತ್ತಿದ್ದೇನೆ~ ಎಂದು ಶಾವೀರ್ ತಿಳಿಸಿದರು.ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಅಜೇಯ 200 ರನ್ ಗಳಿಸಿದಾಗ ಅಂಪೈರ್ ಆಗಿದ್ದವರು ತಾರಪೂರ್ ಎಂಬುದು ವಿಶೇಷ.  53 ವರ್ಷ ವಯಸ್ಸಿನ ಶಾವೀರ್ ಆರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದರು.  `ಅಂಪೈರ್ ಆಗಲು ನನ್ನ ತಂದೆ ಕೆಕಿ ಬಿ ತಾರಪೂರ್‌ಅವರೇ ನನಗೆ ಸ್ಫೂರ್ತಿ. ಅವರು ಕ್ರಿಕೆಟ್ ಕೋಚ್ ಆಗಿದ್ದರು. ಆದರೆ ನಾನು ಅಂಪೈರ್ ಆಗಲು ಬಯಸಿದೆ~ ಎಂದು ಅವರು ತಿಳಿಸಿದರು. ದ್ರಾವಿಡ್ ಅವರ ಬಾಲ್ಯದ ಕೋಚ್ ಕೆಕಿ ಬಿ ತಾರಪೂರ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.