ಶನಿವಾರ, ಮೇ 15, 2021
24 °C
ನಗರ ಸಂಚಾರ

ಈ `ನರಕ'ಕ್ಕೆ ಮುಕ್ತಿ ಎಂದು?

ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ `ನರಕ'ಕ್ಕೆ ಮುಕ್ತಿ ಎಂದು?

ವಿಜಾಪುರ: ರಾಡಿ ನೀರು ತುಂಬಿದ ರಸ್ತೆಗಳು. ಗದ್ದೆಯಂತಾಗಿರುವ ತಗ್ಗು ಪ್ರದೇಶ. ಒಳಚರಂಡಿ ನೀರು ಕೊಳೆಗೇರಿಗಳ ಅಂಗಳದಲ್ಲಿ ಹರಿಯುತ್ತ ಮನೆಯೊಳಗೇ ನುಗ್ಗುತ್ತಿರುವುದರಿಂದ ಅಲ್ಲಿಯ ವಾಸಿಗಳಿಗೆ ನರಕ ಯಾತನೆ. `ಈ ಮಳೆ ಏಕಪ್ಪಾ ಬಂತು' ಎಂದು ಹಳಿಯುವವರೇ ಹೆಚ್ಚು.ಇದು ಐತಿಹಾಸಿಕ ವಿಜಾಪುರ ನಗರಿಯ ದುಸ್ಥಿತಿ. ಇಲ್ಲಿಯವರೆಗೆ ದೂಳಿನಿಂದ ಗೋಳಾಡುತ್ತಿದ್ದ ಜನರಿಗೆ ಈಗ `ಮಳೆಗಾಲದ ಸಂಕಟ' ಎದುರಾಗಿದೆ. ಏತನ್ಮಧ್ಯೆ ಒಳಚರಂಡಿ ಕಾಮಗಾರಿಗಾಗಿ ಅಲ್ಲಲ್ಲಿ ಅಗೆದಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿರುವ ಶಾಪೇಟಿ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗಾಗಿ ದೊಡ್ಡ ಗುಂಡಿ ಅಗೆಯಲಾಗಿದೆ. ಚರಂಡಿಯ ನೀರು ತುಂಬಿಕೊಂಡು ಅದು ರಸ್ತೆಯಲ್ಲಿಯೇ ಹರಿಯುತ್ತಿದೆ. ವಾಹನ-ಜನ ದಟ್ಟಣೆಯೂ ಹೆಚ್ಚು. ಸ್ವಲ್ಪ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಅಲ್ಲಿಯ ನಿವಾಸಿಗಳು.ಇನ್ನು ಮಳೆಯ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿರುವುದು ಇಡೀ ನಗರದ ಸಮಸ್ಯೆ. `ಕೆಸರು ಗದ್ದೆ ಸ್ಪರ್ಧೆ'ಯಲ್ಲಿ ಪಾಲ್ಗೊಂಡವರಂತೆ ವಾಹನ ಸವಾರರು ಯರ‌್ರಾಬಿರ‌್ರಿ ವಾಹನ ಚಾಲನೆ ಮಾಡುತ್ತಾರೆ. ಇದರಿಂದಾಗಿ ರಸ್ತೆಯಲ್ಲಿಯ ರಾಡಿ ನೀರು ಚಿಮ್ಮಿ, ಬಟ್ಟೆ ಕೊಳೆ ಯಾಗುವುದು ಸಾಮಾನ್ಯ ವಾಗಿದೆ ಎಂಬುದು ಪಾದಚಾರಿಗಳ ಅಳಲು.ಎಲ್ಲೆಂದರದಲ್ಲಿ ನೀರು ನಿಲ್ಲುತ್ತಿ ರುವುದರಿಂದ ಸೊಳ್ಳೆ ಗಳ ಹಾವಳಿ ಹೆಚ್ಚಲಿದೆ ಎಂಬುದು ನಾಗರಿಕರ ಆತಂಕ.`ಪ್ರತಿ ವಾರ್ಡ್‌ಗೆ ಮೂರರಿಂದ ನಾಲ್ಕು ಸಮೀಕ್ಷಾ ತಂಡಗಳನ್ನು ರಚಿಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡಬೇಕು. ಅಲ್ಲಿಯ ನಿವಾಸಿಗಳಿಗೆ ಆರೋಗ್ಯ ಶಿಕ್ಷಣ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ' ಎಂಬುದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರ ಹೇಳಿಕೆ.`್ಙ.100ಕೋಟಿ ವೆಚ್ಚದ ನಗರೋತ್ಥಾನ ಯೋಜನೆಯ ಕಾಮಗಾರಿ ಪರಿಶೀಲನೆಗೆ ಜೂನ್ 1ರಂದು ಅಧಿಕಾರಿಗಳ ತಂಡದೊಂದಿಗೆ `ನಗರ ಸಂಚಾರ' ಕೈಗೊಂಡಿದ್ದ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಅವರ ಸೂಚನೆ ನೀಡಿ ವಾರ ಉರುಳಿದರೂ ಅವಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ' ಎನ್ನುತ್ತಾರೆ ನಗರಸಭೆಯ ಸದಸ್ಯರೊಬ್ಬರು.ತುರ್ತು ನಿರ್ವಹಣಾ ಘಟಕ: `ನಗರದಲ್ಲಿ ಮಳೆಯಿಂದ ಅನಾಹುತ ಸಂಭವಿಸಿದರೆ ತುರ್ತು ಕಾರ್ಯಪ್ರವೃತ್ತರಾಗಲು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವ ತುರ್ತು ನಿರ್ವಹಣಾ ಘಟಕ ತೆರೆಯಬೇಕು. ಆ ಕೇಂದ್ರಕ್ಕೆ ದೂರವಾಣಿ ಸೌಲಭ್ಯ ಕಲ್ಪಿಸಿ, ಕರೆ ಸ್ವೀಕಾರಕ್ಕೆ ಮೂರು ಪಾಳಿಯಲ್ಲಿ ಸಿಬ್ಬಂದಿ ನೇಮಿಸಬೇಕು. ಆ ಕೇಂದ್ರ ಮತ್ತು ಅದರ ಮುಖ್ಯಸ್ಥರ ದೂರವಾಣಿ ಸಂಖ್ಯೆಗಳನ್ನು ಮಾಧ್ಯಮಗಳ ಮೂಲಕ ಸಾರ್ವ ಜನಿಕರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿಗಳು ನಗರಸಭೆಗೆ ಸೂಚಿಸಿದ್ದಾರೆ' ಎಂಬುದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ ಅವರ ವಿವರಣೆ.`ನಗರದಲ್ಲಿಯ ಮಳೆ ನೀರಿನ ಚರಂಡಿಗಳನ್ನು ಪತ್ತೆ ಮಾಡಿ ಅವುಗಳ ಹೂಳು ಮತ್ತು ಅತಿಕ್ರಮಣ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅವರ ಸೂಚನೆಯಂತೆ ಈಗಾಗಲೆ ಚರಂಡಿಯ ಹೂಳುತೆಗೆದು ಸ್ವಚ್ಛಗೊಳಿಸುವ ಕಾಮಗಾರಿ ಆರಂಭಿಸಿದ್ದೇವೆ' ಎನ್ನುತ್ತಾರೆ ಅವರು.`ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಮುಗಿಸಿ ವಾಹನ ಸಂಚಾರಕ್ಕೆ ಅನುವು ಮಾಡಬೇಕು. ಇಂಡಿ ರಸ್ತೆಯ ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್‌ನಲ್ಲಿ ಉದ್ಯಾನ ವನ ನಿರ್ಮಿಸಲು ಕಾರ್ಯಪ್ರವೃತ್ತರಾಗಬೇಕು' ಎಂದು ಜಿಲ್ಲಾಧಿಕಾರಿಗಳು ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.