ಈ ಬಾರಿಯೂ ಜಾನ್ ಅಂಪೈರ್

7

ಈ ಬಾರಿಯೂ ಜಾನ್ ಅಂಪೈರ್

Published:
Updated:

ನವದೆಹಲಿ: ಚಿಲಿಯಲ್ಲಿ 2008ರ ಒಲಿಂಪಿಕ್ಸ್ ಹಾಕಿ ಅರ್ಹತಾ ಸುತ್ತಿನ ಫೈನಲ್‌ಗೂ ಮತ್ತು ಭಾನುವಾರ ನಡೆಯಲಿರುವ 2012ರ ಒಲಿಂಪಿಕ್ಸ್ ಅರ್ಹತೆಯ ಅಂತಿಮ ಪಂದ್ಯಕ್ಕೂ ಎರಡು ಸಾಮ್ಯಗಳಿವೆ!ಎರಡೂ ಫೈನಲ್‌ಗಳಲ್ಲಿ ಭಾರತ ತಂಡ ಮೊದಲ ಸ್ಥಾನಕ್ಕಾಗಿ ಹೋರಾಡುತ್ತಿದ್ದು, ಅಂಪೈರ್ ಕೂಡ ಒಬ್ಬರೇ ಆಗಿದ್ದಾರೆ.

ಹೌದು; ಭಾನುವಾರ ನಡೆಯಲಿರುವ ಪುರುಷರ ವಿಭಾಗದ ಹಾಕಿ ಫೈನಲ್‌ನಲ್ಲಿ ಅಂಪೈರಿಂಗ್ ಮಾಡಲಿರುವ ಜಾನ್ ರೈಟ್ ನಾಲ್ಕು ವರ್ಷದ ಹಿಂದಿನ ಫೈನಲ್‌ನಲ್ಲಿಯೂ ಇದ್ದರು.ಆ ಪಂದ್ಯದಲ್ಲಿ ಭಾರತದ ಇಬ್ಬರಿಗೆ ಹಳದಿ ಕಾರ್ಡ್ ಮತ್ತು ಒಬ್ಬರಿಗೆ ಹಸಿರು ಕಾರ್ಡ್ ತೋರಿಸಿದ್ದರಿಂದ ದ್ವಿತಿಯಾರ್ಧದ ಬಹುತೇಕ ಸಮಯ 9 ಜನರೊಂದಿಗೆ ಭಾರತ ತಂಡ ಆಡಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದ ಭಾರತ ಒಲಿಂಪಿಕ್ ಅರ್ಹತೆಯನ್ನು ಕಳೆದುಕೊಂಡಿತ್ತು.ಆದರೆ ಅಂದು ಮತ್ತು ಇಂದಿನ ತಂಡದ ನಡುವೆ ಸಾಕಷ್ಟು ವ್ಯತ್ಯಾಸವಿರುವುದನ್ನು ಅವರು ಗುರುತಿಸಿದ್ದಾರೆ. ಈ ಟೂರ್ನಿಯಲ್ಲಿ ಅವರು ಭಾರತ ಆಡಿರುವ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಈ ಬಾರಿಯ ಪುರುಷರ ತಂಡವು ವೇಗದ ಆಟಕ್ಕೆ ಒತ್ತು ಕೊಟ್ಟಿದೆ. ಇದರ ಫಲವಾಗಿ ಎದುರಾಳಿಗಳು ಒತ್ತಡಕ್ಕೆ ಸಿಲುಕಿ ಸೋಲುತ್ತಿದ್ದಾರೆ. ಜೊತೆಗೆ ಆಟಗಾರರ ನಡುವೆ ಹೊಂದಾಣಿಕೆಯೂ ಇದೆ~ ಎಂದು ಅಭಿಪ್ರಾಯಪಟ್ಟರು.40 ವರ್ಷದ ಅನುಭವಿ ಜಾನ್ ಮೂಲತಃ ದಕ್ಷಿಣ ಆಫ್ರಿಕಾ ಮೂಲದವರು.  ವಿಶ್ವವಿದ್ಯಾಲಯದ ಕ್ರಿಕೆಟ್ ಮತ್ತು ಹಾಕಿ ಆಟಗಾರರಾಗಿದ್ದರು. ನಂತರ ಹಾಕಿ ಅಂಪೈರಿಂಗ್‌ನತ್ತ ಒಲವು ಬೆಳೆಸಿಕೊಂಡವರು.ಮೂರು ಒಲಿಂಪಿಕ್ ಮತ್ತು ಮೂರು ಹಾಕಿ ವಿಶ್ವಕಪ್ ಟೂರ್ನಿಗಳಲ್ಲಿ ಅಂಪೈರಿಂಗ್ ಮಾಡಿದ ಅನುಭವಿ. 2010ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿಯೂ ಅವರು ಅಂಪೈರಿಂಗ್ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry