ಮಂಗಳವಾರ, ಮೇ 24, 2022
27 °C

ಈ ವಾರ ತೆರೆಗೆ: ಪೇಪರ್ ದೋಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಜಗತ್ತಿನ ಸಮಸ್ಯೆಗಳಿಗೆ ಕಾಲ್ಪನಿಕ ಪರಿಹಾರ ಕಂಡುಹಿಡಿಯಬಹುದು ಎಂಬ ಕಲ್ಪನೆಯಿಂದ ರೂಪುತಳೆದ ಚಿತ್ರ  ಪೇಪರ್ ದೋಣಿ~ ಎನ್ನುತ್ತಾರೆ  ನಿರ್ದೇಶಕ ಆರ್ ಕೆ ನಾಯಕ್.ಪೇಪರ್ ಆಯುವ ಯುವಕನೊಬ್ಬ ಸಾಮಾಜಿಕ ಬದ್ಧತೆಯಿಂದ ಸಮಸ್ಯೆಗಳಿಗೆ ತನಗೆ ತೋಚಿದ ಉಪಾಯ ಸೂಚಿಸುವುದು ಚಿತ್ರದ ಕಥಾ ಹಂದರ ಎಂಬುದು ಅವರ ಹೇಳಿಕೆ. ಚಿತ್ರದ ನಿರ್ಮಾಪಕರು ಜನಾರ್ದನ್. ನವೀನ್ ಕೃಷ್ಣ ನಾಯಕರಾಗಿರುವ ಈ ಚಿತ್ರಕ್ಕೆ ಶಾಂತಲಾ ನಾಯಕಿ.ಜೈ ಆನಂದ್ ಛಾಯಾಗ್ರಹಣ, ಶ್ರೀಸುಮನ್ ಸಂಗೀತ ಚಿತ್ರಕ್ಕಿದೆ. ಆದಿ ಲೋಕೇಶ್, ಅವಿನಾಶ್, ವಿನಯಾ ಪ್ರಸಾದ್, ಸತ್ಯಜಿತ್ ತಾರಾಬಳಗದಲ್ಲಿದ್ದಾರೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.