ಈ ವಾರ ತೆರೆಗೆ

7

ಈ ವಾರ ತೆರೆಗೆ

Published:
Updated:

‘ಸೂಸೈಡ್’ 

ಪ್ರಸಾದ್‌ಗುರು ಕಥೆ, ಚಿತ್ರಕಥೆ, ನಿರ್ಮಾಣದ ಜೊತೆ ನಿರ್ದೇಶನವನ್ನೂ ಮಾಡಿರುವ ಈ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಜೀವನದಲ್ಲಿ ಎದುರಾಗುವಂತಹ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ಜೀವನವನ್ನು ಧೈರ್ಯದಿಂದ ಎದುರಿಸಿ ಎಂಬ ಸಂದೇಶವುಳ್ಳ ಕಥಾ ಹಂದರ ಈ ಚಿತ್ರದ್ದು. ರವೀಶ್ ಸಂಗೀತ, ಸುರೇಂದ್ರನಾಥ್ ಬೇಗೂರ್ ಛಾಯಾಗ್ರಹಣ, ಕೆ.ರಾಮನಾರಾಯಣ್ ಪಾಂಡು ಸಾಹಿತ್ಯ, ಎಂ.ಎನ್.ಸ್ವಾಮಿ ಸಂಕಲನ, ಕಪಿಲ್ ನೃತ್ಯ ನಿರ್ದೇಶನವಿದೆ.ಋತಿಕ್, ಕಲ್ಯಾಣಿ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಸಂಗೀತಶೆಟ್ಟಿ, ಭಾಗ್ಯಲಕ್ಷ್ಮಿ ಮುಂತಾದವರ ಅಭಿನಯವಿದೆ.

‘ರಂಗಪ್ಪ ಹೋಗ್ಬಿಟ್ನಾ’

ಎನ್.ರವಿಕುಮಾರ್ ನಿರ್ಮಾಣದ ‘ರಂಗಪ್ಪ ಹೋಗ್ಬಿಟ್ನಾ’ ಚಿತ್ರ ರಾಜ್ಯಾದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಾಸ್ಯಪ್ರಧಾನ ಚಿತ್ರಕ್ಕೆ ನಾಯಕನಾಗಿ ರಮೇಶ್ ಅಭಿನಯಿಸಿದ್ದಾರೆ. ಸಂಜನಾ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸಿಹಿಕಹಿ ಚಂದ್ರು, ರವಿಕಿರಣ್, ಮನದೀಪ್‌ರಾಯ್, ಸಾಧು ಕೋಕಿಲ, ಲಯೇಂದ್ರ ಮುಂತಾದವರಿದ್ದಾರೆ.ಎಂ.ಎಲ್.ಪ್ರಸನ್ನ ಅವರ ಚಿತ್ರಕಥೆ, ಸಂಭಾಷಣೆ, ಸಂಗೀತ, ನಿರ್ದೇಶನವಿದೆ. ಎ.ಸಿ.ಮಹೇಂದರ್ ಛಾಯಾಗ್ರಹಣ, ಹರ್ಷ ಅವರ ಸಂಕಲನವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry