ಸೋಮವಾರ, ಅಕ್ಟೋಬರ್ 21, 2019
21 °C

ಈ ವಾರ ತೆರೆಗೆ

Published:
Updated:
ಈ ವಾರ ತೆರೆಗೆ

`ಕೋಕೋ~

ಭಾಸ್ಕರ್ ನಿರ್ಮಿಸಿರುವ, ಆರ್.ಚಂದ್ರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ  ಚಿತ್ರ `ಕೋಕೋ~. ರಮಣಗೋಗುಲ ಅವರ ಸಂಗೀತ ನಿರ್ದೇಶನ. ಛಾಯಾಗ್ರಹಣ ಕೆ.ಎಸ್.ಚಂದ್ರಶೇಖರ್. ಸಂಕಲನ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶನ ಹೊಸ್ಮನೆಮೂರ್ತಿ . ಸಾಹಸ ಥ್ರಿಲ್ಲರ್ ಮಂಜು, ರಾಮ್‌ಲಕ್ಷ್ಮಣ್.  ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಅನುಪ್ರಭಾಕರ್, ಹರ್ಷಿಕಾ ಪೂಣಚ್ಚ, ರವಿಕಾಳೆ, ರಂಗಾಯಣ ರಘು,  ಹೊನ್ನವಳ್ಳಿ ಕೃಷ್ಣ, ರಾಜು ತಾಳಿಕೋಟೆ, ಬಿರಾದಾರ್,  ಪದ್ಮಜಾರಾವ್ ಇತರರು ಇದ್ದಾರೆ.

`ಸಿದ್ಲಿಂಗು~

ಟಿ.ಪಿ.ಸಿದ್ದರಾಜು ನಿರ್ಮಿಸಿರುವ `ಸಿದ್ಲಿಂಗು~ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ವಿಜಯಪ್ರಸಾದ್. ನಾಯಕನಾಗಿ ಯೋಗೀಶ್, ನಾಯಕಿಯಾಗಿ ರಮ್ಯ ನಟಿಸಿರುವ ಚಿತ್ರದ ತಾರಾಗಣದಲ್ಲಿ ಸುಮನ್ ರಂಗನಾಥ್, ಅಚ್ಯುತರಾವ್, ಗಿರಿಜಾಲೋಕೇಶ್,  ರಂಗಾಯಣರಘು, ಶರಣ್, ವತ್ಸಲಾ ಮೋಹನ್ ಮುಂತಾದವರಿದ್ದಾರೆ.  

 

Post Comments (+)