ಈ ವಾರ ತೆರೆಗೆ

7

ಈ ವಾರ ತೆರೆಗೆ

Published:
Updated:

`ಗೋಕುಲ ಕೃಷ್ಣ~

ಪಿ. ಶೇಖರ್ ಗೌಡ ನಿರ್ಮಿಸಿರುವ ವಿ.ಎಂ. ಜಯಕಣ್ಣನ್ ನಿರ್ದೇಶನದ `ಗೋಕುಲ ಕೃಷ್ಣ~ ಚಿತ್ರದ ಛಾಯಾಗ್ರಹಣ ಎ. ವಿನೋದ್ ಭಾರತಿ, ಸಂಗೀತ ಎಸ್.ಎ. ರಾಜಕುಮಾರ್, ಸಂಕಲನ ಸಾಯಿ ಸುರೇಶ್, ನೃತ್ಯ ದೀನ-ಅರವಿಂದ್-ಮಾಲೂರು ಶ್ರಿನಿವಾಸ್, ರಾಮು, ಸಾಹಸ-ಡಿಫ್ರೆಂಟ್ ಡ್ಯಾನಿ. ತಾರಾಗಣದಲ್ಲಿ ಪ್ರಜ್ವಲ್, ಅನನ್ಯ, ದೊಡ್ಡಣ್ಣ, ಸಾಧು ಕೋಕಿಲ, ಜೈ ಜಗದೀಶ್, ಭವ್ಯಾ, ಸುರೇಶ್ ಚಂದ್ರ, ಕುರಿಗಳು ಪ್ರತಾಪ್, ಜಯಲಕ್ಷ್ಮಿ ಪಾಟೀಲ್, ಶಶಿಕಲಾ, ಸಂಗೀತ ಅಭಿನಯಿಸಿದ್ದಾರೆ.`ಮಿಸ್ಟರ್ 420~

ಸಂದೇಶ್ ನಾಗರಾಜ್ ನಿರ್ಮಿಸಿರುವ `ಮಿಸ್ಟರ್ 420~ ಚಿತ್ರವನ್ನು ಪ್ರದೀಪ್‌ರಾಜ್ ನಿರ್ದೇಶಿಸಿದ್ದಾರೆ. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ವಿ.ಹರಿಕೃಷ್ಣ ಸಂಗೀತ, ಆರ್.ಗಿರಿ ಛಾಯಾಗ್ರಹಣ, ಚಂದ್ರು ಸಾಹಸ ನಿರ್ದೇಶನ, ರಾಮು, ಮುರಳಿ, ಶಿವು ನೃತ್ಯ ನಿರ್ದೇಶನ, ಕುಮಾರ್ ಸಂಕಲನ, ಮೋಹನ್ ಪಂಡಿತ್ ಕಲಾ ನಿರ್ದೇಶನವಿದೆ. ಗಣೇಶ್ ನಾಯಕ. ಪ್ರಣೀತಾ ನಾಯಕಿ. ರಂಗಾಯಣ ರಘು, ಸಾಧು ಕೋಕಿಲಾ, ಚಿಕ್ಕಣ್ಣ, ಪಂಕಜ ತಾರಾಬಳಗ ಚಿತ್ರಕ್ಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry