ಶನಿವಾರ, ನವೆಂಬರ್ 23, 2019
18 °C

ಈ ವಾರ ತೆರೆಗೆ

Published:
Updated:

`ಅಂದರ್ ಬಾಹರ್'

ರಜನೀಶ್, ಪ್ರಸಾದ್‌ರಾವ್, ಅಂಬರೀಶ್, ಭಾಸ್ಕರ್, ಅವಿನಾಶ್ ನಿರ್ಮಿಸಿರುವ `ಅಂದರ್ ಬಾಹರ್' ಚಿತ್ರವನ್ನು ಫಣೀಶ್ ಎಸ್. ರಾಮನಾಥಪುರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ವಿಜಯ ಪ್ರಕಾಶ್ ಸಂಗೀತ ನೀಡಿದ್ದಾರೆ. ಶಿವರಾಜಕುಮಾರ್, ಪಾರ್ವತಿ ಮೆನನ್ ನಾಯಕ- ನಾಯಕಿ.

`ಈ ಬಣ್ಣ ಲೋಕದಲಿ'

ರಾಮರಾವ್ ಪುಟಾಣೆ ನಿರ್ದೇಶಿಸಿರುವ `ಈ ಬಣ್ಣ ಲೋಕದಲಿ' ಚಿತ್ರದಲ್ಲಿ ರಮೇಶ್‌ಭಟ್, ವೀಣಾಸುಂದರ್, ರೇಖಾ ದಾಸ್, ಮೂಗು ಸುರೇಶ್, ರಮೇಶ್‌ಪಂಡಿತ್, ಬಿರಾದರ್, ರಾಘವೇಂದ್ರ ಪ್ರಸಾದ್, ರಾಜೇಶ್ ಕಶ್ಯಪ್, ಗೋಪಾಲ ಐಯ್ಯರ್ ಮುಂತಾದವರು ನಟಿಸಿದ್ದಾರೆ. ದಿನೇಶ್ ಕುಮಾರ ಸಂಗೀತ, ಗೌರಿ ವೆಂಕಟೇಶ್ ಛಾಯಾಗ್ರಹಣ ಚಿತ್ರಕ್ಕಿದೆ.

`ಲೌ' 

ಡಾ. ಉದಯ್ ಕುಮಾರ್, ನಿರ್ಮಾಣದ `ಲೌ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನ ಪುನೀತ್ ಆರ್ಯ ಅವರದು. ಸಂಗೀತ- ಅಭಿಷೇಕ್ ಮತ್ತು ರಾಜ್ ಭಾಸ್ಕರ್, ಸಂಕಲನ- ಶಿವರಾಜ್ ಮೇಹು. ಚಿತ್ರದ ನಾಯಕ ಶಕ್ತಿಕುಮಾರ್.ನಾಯಕಿ ಸುಕೃತಾ ವಾಗ್ಳೆ.

ಪ್ರತಿಕ್ರಿಯಿಸಿ (+)