ಮಂಗಳವಾರ, ನವೆಂಬರ್ 19, 2019
22 °C

ಈ ವಾರ ತೆರೆಗೆ

Published:
Updated:
ಈ ವಾರ ತೆರೆಗೆ

ಬೆಂಕಿ ಬಿರುಗಾಳಿ

`ಬೆಂಕಿ ಬಿರುಗಾಳಿ` ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿರುವವರು ಎಸ್.ಕೆ.ಬಷೀದ್. ಅವರು ಈ ಚಿತ್ರದ ನಿರ್ಮಾಪಕರು ಹೌದು. ಎಂ.ಎಂ.ಶ್ರಿಲೇಖ ಸಂಗೀತ ನೀಡಿರುವ ಈ ಚಿತ್ರಕ್ಕೆ ಕೆ.ಎಸ್. ಚೆಲುವರಾಜ್ ಛಾಯಾಗ್ರಹಣವಿದೆ. ಮನೋಹರ್ ಸಂಕಲನ, ಗಣೇಶ್, ನಿಕ್‌ಸನ್, ಅರವಿಂದ್ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಹಾಗೂ ದಳಪತಿ ದಿನೇಶ್ ಸಾಹಸ ನಿರ್ದೇಶನವಿದೆ. ತಾರಾಗಣದಲ್ಲಿ ರಿಶಿ, ಬಷೀದ್, ನಮಿತಾ, ಸಂಧ್ಯಾ, ರಿಶಿಕಾ ಸಿಂಗ್, ರೇಖಾ, ಮೋನಿಕಾ, ಬಾನು ಮೆಹ್ರಾ, ಬುಲೆಟ್ ಪ್ರಕಾಶ್, ಲಯೇಂದ್ರ, ಬ್ಯಾಂಕ್ ಜನಾರ್ದನ್ ಮುಂತಾದವರು ನಟಿಸಿದ್ದಾರೆ.

ಜಟಾಯು

`ಜಟಾಯು' ಚಿತ್ರದ ನಿರ್ದೇಶಕ ಮತ್ತು ನಾಯಕ ರಾಜ್. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ನಿರ್ಮಾಪಕರು ಪ್ರಭಾಕರ್.ಬಿ. ಸುರೇಶ್ ಸಂಭಾಷಣೆ, ವಿನಯ್ ಚಂದ್ರ ಸಂಗೀತ, ಎಂ.ಯು. ನಂದಕುಮಾರ್ ಛಾಯಾಗ್ರಹಣ, ಕೆ. ಎಂ. ಪ್ರಕಾಶ್ ಸಂಕಲನ, ಹರ್ಷ, ಕಲೈ, ಮುರಳಿ, ರಾಮು ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಹಾಗೂ ಮಾಸ್ ಮಾದ ಸಾಹಸ ಚಿತ್ರಕ್ಕೆ ಇದೆ.ಸುರಭಿ ಮತ್ತು ರೂಪಶ್ರಿ ನಾಯಕಿಯರು. ಅವಿನಾಶ್, ನಟರಾಜ್, ಬುಲೆಟ್ ಪ್ರಕಾಶ್, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಡ್ಯಾನಿ, ಸತೀಶ್, ಸಿದ್ದರಾಜ್ ಕಲ್ಯಾಣಕರ್, ಕುರುಪ್ ರಮೇಶ್ ಇನ್ನಿತರರು ತಾರಾಗಣದಲ್ಲಿದ್ದಾರೆ.

ಜನ್ಮ

ಆನೇಕಲ್ ಬಾಲರಾಜ್ ನಿರ್ಮಾಣದ ಚಕ್ರವರ್ತಿ ನಿರ್ದೇಶನದ `ಜನ್ಮ' ಚಿತ್ರದ ಛಾಯಾಗ್ರಹಣ ಜಗದೀಶ್ ವಾಲಿ, ಸಂಗೀತ ಅನೂಪ್ ಸೀಳಿನ್, ಸಂಕಲನ ಕೆ.ಗಿರೀಶ್‌ಕುಮಾರ್, ಸಾಹಸ ಕೌರವ ವೆಂಕಟೇಶ್, ನೃತ್ಯ ಸದಾ ರಾಘವ - ತ್ರಿಭುವನ್ ಅವರದು. ತಾರಾಗಣದಲ್ಲಿ ಸಂತೋಷ್, ಮೀನಾಕ್ಷಿ, ಸಿತಾರಾ, ಪೊನ್ನಾಬಲಂ, ತಲೈವಾಸಲ್ ವಿಜಯ್, ಅನುರಾಧ, ಬುಲೆಟ್ ಪ್ರಕಾಶ್ ಮುಂತಾದವರು ಅಭಿನಯಿಸಿದ್ದಾರೆ.

 

ಪ್ರತಿಕ್ರಿಯಿಸಿ (+)