ಈ ವಾರ ತೆರೆಗೆ

7

ಈ ವಾರ ತೆರೆಗೆ

Published:
Updated:

‘ಬೃಂದಾವನ’

ಡಿ. ಸುರೇಶಗೌಡ,  ಪಿ.ಎಸ್. ಶ್ರೀನಿವಾಸಮೂರ್ತಿ ನಿರ್ಮಿಸಿರುವ ‘ಬೃಂದಾವನ’ ಚಿತ್ರ. ಚಿತ್ರದ ನಿರ್ದೇಶಕ ಕೆ. ಮಾದೇಶ್. ಕೆ.ವಿ. ರಾಜು ಸಂಭಾಷಣೆ, ಹರಿಕೃಷ್ಣ ಸಂಗೀತ, ಕವಿರಾಜ್, ನಾಗೇಂದ್ರ ಪ್ರಸಾದ್ ಸಾಹಿತ್ಯ, ರಮೇಶ್‌ಬಾಬು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪಳನಿರಾಜ್ ಸಾಹಸ ಚಿತ್ರಕ್ಕಿದೆ. ದರ್ಶನ್, ಕಾರ್ತಿಕಾ ನಾಯರ್, ಮಿಲನಾ, ಗೀತಾ, ಶರತ್‌ಬಾಬು, ಸಾಯಿಕುಮಾರ್, ನಿರೋಷ, ಜೈ ಜಗದೀಶ್, ಸಂಗೀತ, ಸಾಧು ಕೋಕಿಲ, ಮೋಹನ್ ಜುನೇಜಾ, ದೊಡ್ಡಣ್ಣ, ಕಿಲ್ಲರ್ ವೆಂಕಟೇಶ್, ಶೋಭಾ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.

ಅಕ್ಟೋಬರ್‌ನಲ್ಲಿ ‘ಘರ್ಷಣೆ’

ಶಂಕರ್‌ಗೌಡ ಹಾಗೂ ಶಂಕರ್‌ರೆಡ್ಡಿ ನಿರ್ಮಿಸಿರುವ ‘ಘರ್ಷಣೆ’ ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾ ಗಲಿದೆ. ದಯಾಳ್‌ ಪದ್ಮನಾಭನ್ ನಿರ್ದೇಶನದ ಈ ಚಿತ್ರದ ನಾಯಕಿ  ಮಾಲಾಶ್ರೀ. ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಆಶೀಷ್‌ ವಿದ್ಯಾರ್ಥಿ, ರವಿಶಂಕರ್, ಮುನಿ, ಗುರುರಾಜ ಹೊಸಕೋಟೆ, ಕಾಶಿ, ಮೈಕೋ ನಾಗರಾಜ್ ಇತರರು ಚಿತ್ರದಲ್ಲಿ ಇದ್ದಾರೆ. ಶ್ಯಾಂಪ್ರಸಾದ್ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry