ಈ ವಾರ ತೆರೆಗೆ

7

ಈ ವಾರ ತೆರೆಗೆ

Published:
Updated:

‘ಅಂಗಾರಕ’

ಪ್ರಜ್ವಲ್ ದೇವರಾಜ್, ಪ್ರಣೀತ ಮುಖ್ಯ ಭೂಮಿಕೆಯ ಚಿತ್ರ ಅಂಗಾರಕ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ  ನಿರ್ದೇಶಕ ಶ್ರೀನಿವಾಸ ಕೌಶಿಕ್. ಹಾರ್ದಿಕಾ ಶೆಟ್ಟಿ, ಮುನಿ, ಅವಿನಾಶ್ ಮತ್ತಿತರರು ತಾರಾಗಣದಲ್ಲಿ ಇದ್ದಾರೆ. ಜಯಸುಧಾ ರಾಘವೇಂದ್ರ ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ‘ನಗೆ ಬಾಂಬ್’

ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ನಿರ್ಮಾಣದ ‘ನಗೆ ಬಾಂಬ್’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ನಾಗೇಂದ್ರ ಅರಸ್ ಈ ಚಿತ್ರದ ನಿರ್ದೇಶಕ. ರವಿಶಂಕರ್ ಗೌಡ, ಅನಿತಾ ಭಟ್,  ರಾಜೇಂದ್ರ ಕಾರಂತ್, ಸಾಧು ಕೋಕಿಲ, ಲಯನ್ ರಾವ್ ಮತ್ತಿತರರು ತಾರಾಗಣದಲ್ಲಿ ಇದ್ದಾರೆ. ಆನಂದಪ್ರಿಯ ಸಂಭಾಷಣೆ, ಕಿರಣ್ ಹಾಗೂ ಸುರೇಶ್ ಅವರ ಛಾಯಾಗ್ರಹಣ, ರೆಡ್ಡಿ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.‘ಮಹಾಶರಣ ಹರಳಯ್ಯ’

ಎ. ದೇವರಾಜ್ ನಿರ್ಮಿಸಿರುವ ‘ಮಹಾಶರಣ ಹರಳಯ್ಯ’ ಚಿತ್ರ ಬಿಡುಗಡೆಯಾಗುತ್ತಿದೆ. ಬಿ.ಎ. ಪುರುಷೋತ್ತಮ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌರಿ ವೆಂಕಟೇಶ್ ಛಾಯಾಗ್ರಹಣವಿದೆ. ಜಿಮ್ಮಿರಾಜ್ ಸಂಗೀತ, ಎಸ್. ಕುಮಾರ್, ಓಂಕಾರ್ ಸಾಹಿತ್ಯವಿದೆ. ಶ್ರೀಧರ್, ರಮೇಶ್ ಅರವಿಂದ್, ರಾಮಕೃಷ್ಣ, ರಮೇಶ್‌ ಭಟ್,  ಜಯಲಕ್ಷ್ಮಿ, ಶೀಲಾ, ಸುಮಿತ್ರಾ ಮತ್ತಿತರರು ಅಭಿನಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry