ಈ ವಾರ ತೆರೆ ಕಂಡ ಸಿನಿಮಾಗಳು

7

ಈ ವಾರ ತೆರೆ ಕಂಡ ಸಿನಿಮಾಗಳು

Published:
Updated:

`ಕಿಲಾಡಿ ಕಿಟ್ಟಿ~

ಎಸ್.ವಿ.ಶಿವಕುಮಾರ್ ನಿರ್ಮಿಸಿರುವ `ಕಿಲಾಡಿ ಕಿಟ್ಟಿ~ ಚಿತ್ರವನ್ನು ಅನಂತರಾಜು ನಿರ್ದೇಶಿಸಿದ್ದಾರೆ. ನಾಯಕರಾಗಿ ಶ್ರಿನಗರ ಕಿಟ್ಟಿ ಅಭಿನಯಿಸಿದ್ದಾರೆ. ಹರಿಪ್ರಿಯ ಹಾಗೂ ನಿವೇದಿತಾ (ಸ್ಮಿತಾ) ನಾಯಕಿಯರು.  ಮಾನ್ಸಿ, ಶರಣ್, ದಿಲೀಪ್, ಆನಂದ್,ಸತ್ಯಜಿತ್, ಸಂಗೀತ, ಮುಖ್ಯಮಂತ್ರಿ ಚಂದ್ರು, ರಂಗಾಯಣ ರಘು, ಬಿ.ಜಯಮ್ಮ, ವೀಣಾ ಸುಂದರ್, ರಮೇಶ್ ಪಂಡಿತ್, ಬ್ರಹ್ಮಾವರ್, ವಿ.ಮನೋಹರ್ ಮುಂತಾದವರು ಈ ಚಿತ್ರದ ಕಲಾವಿದರು.ರವಿಕುಮಾರ್ ಸಾನಾ ಛಾಯಾಗ್ರಹಣ, ಜೆಸಿಗಿಫ್ಟ್ ಸಂಗೀತ, ಜೋ.ನಿ.ಹರ್ಷ ಸಂಕಲನ, ಮಾಸ್ ಮಾದಾ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

`ಬ್ರೇಕಿಂಗ್ ನ್ಯೂಸ್~

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಬ್ರೇಕಿಂಗ್ ನ್ಯೂಸ್~ ಚಿತ್ರದಲ್ಲಿ ಅಜಯ್ ರಾವ್, ರಾಧಿಕಾ ಪಂಡಿತ್ ನಾಯಕ-ನಾಯಕಿ.ಅನಂತನಾಗ್, ಸಾಧುಕೋಕಿಲಾ, ರಂಗಾಯಣ ರಘು, ಮಂಡ್ಯರಮೇಶ್, ಸಾಧುಕೋಕಿಲಾ, ಕಾಸರಗೋಡು ಚಿನ್ನ, ಗುರುದತ್, ಕಿರಣ್ಮಯಿ, ಚಂದ್ರು, ನಾಗರಾಜಮೂರ್ತಿ, ವೀಣಾಭಟ್, ಚಿದಾನಂದ್, ರಘುನಂದನ್, ಸಿಹಿಕಹಿಚಂದ್ರು, ಬಿರಾದಾರ್, ರೋಹಿಣಿ, ಶಾಂತಲಾ ವಟ್ಟಂ, ಪ್ರಕಾಶ್ ಶೆಣೈ, ಎಸ್. ಶಿವರಾಂ ಮುಂತಾದವರು ನಟಿಸಿದ್ದಾರೆ.ಬಸವರಾಜ್ ಅರಸ್ ಸಂಕಲನ, ಸ್ಟೀಫನ್ ಪ್ರಯೋಗ್ ಸಂಗೀತ, ಮದನ್ ಹರಿಣಿ ನೃತ್ಯ ನಿರ್ದೇಶನ, ಕೃಷ್ಣಕುಮಾರ್ ಛಾಯಾಗ್ರಹಣ, ಯೋಗರಾಜ ಭಟ್, ನಾಗತಿಹಳ್ಳಿ ಚಂದ್ರಶೇಖರ, ನಾ.ದಾಮೋದರ ಶೆಟ್ಟಿ ಹಾಡುಗಳನ್ನು ಬರೆದಿದ್ದಾರೆ. 

`ಗಾಂಧಿ ಸ್ಮೈಲ್ಸ್~ 

`ಗಾಂಧಿ ಸ್ಮೈಲ್ಸ್~ ಚಿತ್ರದಲ್ಲಿ ಗಾಂಧೀಜಿ ಪ್ರತಿಪಾದಿಸಿರುವ `ಗ್ರಾಮ ಸ್ವರಾಜ್ಯ~ ಪರಿಕಲ್ಪನೆಯನ್ನು ಒಂದು ವಿಶೇಷ ಸನ್ನಿವೇಶಕ್ಕೆ ಅಳವಡಿಸಿ ಚಿತ್ರಿಸಲಾಗಿದೆ. ಎನ್.ಎಂ.ಸುರೇಶ್ ನಿರ್ಮಾಣದ ಈ ಚಿತ್ರವನ್ನು ಕ್ರಿಶ್ ಜೋಶಿ ನಿರ್ದೇಶಿಸಿದ್ದಾರೆ.ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಪವಿತ್ರಾ ಲೋಕೇಶ್, ಸಿ.ಆರ್.ಸಿಂಹ, ಯಶವಂತ ಸರದೇಶಪಾಂಡೆ, ಸ್ಮಿತಾ, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ. ವೀರ ಸಮರ್ಥ್ ಸಂಗೀತ, ಎಸ್. ರಾಮಚಂದ್ರ ಛಾಯಾಗ್ರಹಣ, ರಾಘವೇಂದ್ರ ಕಾಮತ್ ಸಾಹಿತ್ಯ  ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry